ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ
ಕಾಡಿಗೆ ಹಚ್ಚಿದ ಮೋಡ; ಮಳೆಯ ಸುಳಿವಿಲ್ಲ ಬರಡು ನೆಲ ನೆತ್ತರುಗೆಂಪಿನ ಚಂದ್ರ ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ. ಸ್ವರ್ಗಲೋಕದ ಬೆಳಕು ಕೈಯಂಚಿಗೆ ತಾಗಿ ಅದೃಶ್ಯ ಮನದ ಸಮುದ್ರದಲ್ಲಿ ಶವರೂಪಿ ಬಣ್ಣದ ಮೀನುಗಳು; ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ....
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
ನವೀನ್ ಕುಮಾರ್.ಎ
ಕಾಡಿಗೆ ಹಚ್ಚಿದ ಮೋಡ; ಮಳೆಯ ಸುಳಿವಿಲ್ಲ ಬರಡು ನೆಲ ನೆತ್ತರುಗೆಂಪಿನ ಚಂದ್ರ ನಕ್ಷತ್ರಗಳ ಗುಂಪಿನಲೂ ನಗೆಯ ಕಂಪಿಲ್ಲ. ಸ್ವರ್ಗಲೋಕದ ಬೆಳಕು ಕೈಯಂಚಿಗೆ ತಾಗಿ ಅದೃಶ್ಯ ಮನದ ಸಮುದ್ರದಲ್ಲಿ ಶವರೂಪಿ ಬಣ್ಣದ ಮೀನುಗಳು; ಮತ್ತೆ ಬಿರಿಯುವುದಿಲ್ಲ ಮಲ್ಲಿಗೆ....
ಅವಳ ಪ್ರಮಾಣಬದ್ಧ ಬೆತ್ತಲೆಗೆ ಕರಗಿದ- ಚಿತ್ರಕಾರ, ಅಗಮ್ಯದೆಡೆಗೆ ತುಡಿಯುತ್ತ, ತ್ರಿಕೋನ,ವೃತ್ತಗಳ ಉನ್ಮತ್ತತೆಗೆ ತಲೆಬಾಗಿ,ನಡುಗಿದ; ತನ್ನೊಳಗಿನ ರೇಖೆ ದಿಕ್ಕು ತೋಚಿದೆಡೆಗೆ ತುಯ್ಯುತ್ತಾ- ತಾನೂ ಒಂದು ಆಕೃತಿಯಾಗುವ, ಕತ್ತಲೆಯ ಬೆತ್ತಲೆಯೊಡನೆ ಘಷಿ...
....ಹಾರಾಡುವ ದೊಡ್ಡ ದೊಡ್ಡ ಬಾವುಟಗಳ ಕೆಳಗೆ ಅರೆಬೆತ್ತಲೆ ಹೆಣ್ಣೊಬ್ಬಳು ನೀರಾದಳು, ಬಾವುಟಗಳು ಕೇಕೆ ಹಾಕಿ ಆಕಾಶ ನೋಡಿದವು ಮಿಂಡನನ್ನು ನೆನೆದು. ಸಾವಿರ ಕಣ್ಣುಗಳಾಗಿ ಅರಳಿದ ಪಾಂಚಾಲಿಯ ಸೀರೆಗೆ ಕುದುರೆಗಳು ಕೆನೆಯುವ ಸದ್ದು ಕೇಳಿ ಮಂಪರು ಅಡರಿತು...
ಅಮಾನವೀಯತೆಯ 'ಹುಳು' ನಮ್ಮ ಮೆದುಳನ್ನು ಹೊಕ್ಕು, ಕೊಬ್ಬಿ ಕುಣಿಯುತ್ತಿರುವಾಗ, ಮನಗಳಿಂದ ತೂರಲ್ಪಟ್ಟು.... ನೆಲಕ್ಕೆ ಅಪ್ಪಳಿಸಿದ ಬಾಂಬುಗಳು.... ಬೇರೂರಿ..... ಕುಡಿಯೊಡೆದು... ದೇಹದ ತುಂಬೆಲ್ಲಾ ಹೂಗಳನ್ನರಳಿಸಿಕೊಂಡವು........
ಬೆರಗು ಮೂಡಿಸಿ ನಿಂತಿವೆ ಕವಿತೆಗಳ ಸಾಲಾಗಿ ನಾ ಬಲ್ಲ ಪದಗಳೇ.. ನನ್ನೊಳಗನು ಬೆಳಗಿ; ಹೆಪ್ಪುಗಟ್ಟಿದೆ ಪಿಂಡ; ನೀರವವನೆ ಸಂಭೋಗಿಸಿ.