ಪೆದ್ದುಗುಂಡನ ರಗಳೆ - ೪
ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ ಸಿರಿದೇವಿ ಬರುವಳು - ಪೆದ್ದುಗುಂಡ
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
raghuonlife
ಹೂಂಕರಿಸಿ ಘೀಳಿಟ್ಟು ತಮಸ ಹೊರಗಟ್ಟು ಹಣತೆ ಹೊನ್ನ ಬೆಳಗಿಸಿ ಸತ್ತ್ವ ಬರಮಾಡು ದೀಪದ ಬೆಳಕಲ್ಲಿ ಮಿಂದ ಮನೆಯೊಳಗೆ ಸಿರಿದೇವಿ ಬರುವಳು - ಪೆದ್ದುಗುಂಡ
ನಭದ ಆಳೆತ್ತರ ಉದ್ದಗಲಗಳುಂಟೆ ಅರಿವಿನ ಹರವು ಅದಕೆ ದುಪ್ಪಟ್ಟು ಕಲಿಕೆ ಪಥ ಅಂತ್ಯವಿಲ್ಲದ ಪಯಣ ಜ್ಞಾನದಾಹ ಚಿರಕಾಲ - ಪೆದ್ದುಗುಂಡ
ಒಂದೊಮ್ಮೆ ಎಲ್ಲೆಡೆ ಬೆಳಕ ಕುಡಿಮಿಂಚು, ತಾಮಸದ ಕರಿ ನೆರಳ ಸರಿಯಿತು ಸಂಚು. ಕತ್ತಲೆಯ ಸುಖಭೂತ ನರಳಿ ಬಸವಳಿಯೆ, ದೀಪ ಜ್ಯೋತಿ ಅರಳಿತು - ಪೆದ್ದುಗುಂಡ
ಸುಖ ಸುಪ್ಪತ್ತಿನೊಳಾಡುವರಂ ಕಂಡು ಕರುಬುವ ಮಂದಿ ಕಷ್ಟಕೋಟಲೆ ರಹಿತ ಸಗ್ಗ ಘೋರವೆಂದುಲಿವರು ಪಾಪವದಲ್ಲ ಪುಣ್ಯವೋ - ಪೆದ್ದುಗುಂಡ
ಪಗಡೆ ರಂಗದಿ ಎಲ್ಲವನು ಸೋತ ರಣ ರಂಗದಿ ಗೆದ್ದ, ಎಲ್ಲವನು. ಅಲ್ಲಿ ಮಾನ, ಇಲ್ಲಿ ಜೀವವೇ ಪಣ ! ಎರಡೂ ಜೂಜಿನಾಟ- ಪೆದ್ದುಗುಂಡ