ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಅಂತರಂಗದ ಮೃದಂಗ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಅಂತರಂಗದ ಮೃದಂಗ

ನರಹಳ್ಳಿ ಬಾಲಸುಬ್ರಹ್ಮಣ್ಯ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೫೪ ವೀಕ್ಷಣೆ ೦
ಬೆಲೆ
₹100
ಅಂತರಂಗದ ಮೃದಂಗ - (ವೈಚಾರಿಕ ಪ್ರಬಂಧಗಳು) ನರಹಳ್ಳಿಯವರ ಪ್ರಬಂಧಗಳದ್ದು ಸಾವಧಾನದ ವಿಲಂಬಿತ ನಡೆ ಆದುದರಿಂದ ಅದಕ್ಕೆ ದಕ್ಕುವ ಸೂಕ್ಷ್ಮಗಳು ಅಪರೂಪದವು. ಆಧುನಿಕ ಜೀವನದ ಬಿಕ್ಕಟ್ಟುಗಳ ಬಗ್ಗೆ ನರಹಳ್ಳಿಯವರ ಚಿಂತನೆಗಳು ಸ್ವಾನುಭವ ಅನುಸಂಧಾನದಿಂದಲೇ ತತ್ವೀಕರಣಗೊಳ್ಳುವುದರಿಂದ ಅಧೀಕೃತತೆಯ ಮುದ್ರೆಯನ್ನು ಅನಾಯಾಸವಾಗಿ ಪಡೆಯುತ್ತವೆ. ಲಲಿತ ಪ್ರಬಂಧಕ್ಕೆ ಬೌದ್ಧಿಕತೆಯ ಬೆನ್ನೆಲುಬು ದೊರಕಿಸಿದ್ದು ನರಹಳ್ಳಿಯವರ ಪ್ರಬಂಧಗಳ ವೈಶಿಷ್ಟ್ಯವಾಗಿದೆ. ಸಮಕಾಲೀನ ಜೀವನದ ಉಪಯೋಗಿ ದೃಷ್ಟಿಯ ಅವಸರ ಗತಿಗೆ ವಿಲಂಬಿತ ನಡೆಯ ಎದುರೀಜು ಹಾಕುವ ಪ್ರಬಂಧಗಳ ಚಿಂತನ ದ್ರವ್ಯ ಹೊಸ ನೆಲೆಯಲ್ಲಿ ಓದುಗ ಯೋಚಿಸುವುದನ್ನು ಒತ್ತಾಯಿಸುವಷ್ಟು ಸಮರ್ಥವಾಗಿವೆ. ಪ್ರಬಂಧಗಳ ಶೈಲಿ ಪು.ತಿ.ನ. ಅವರ ಪ್ರಬಂಧಗಳ ರಚನಾ ಕ್ರಮವನ್ನು ನೆನಪಿಸುವಂತಿವೆ. ಈ ಹೊತ್ತಿನ ಸಾಮಾಜಿಕ ಪಲ್ಲಟಗಳನ್ನು ಗಾಢವಾದ ವಿಶಾದದ ನೆಲೆಯಲ್ಲಿ ಹಿಡಿದಿಡುವ ಈ ಪ್ರಬಂಧಗಳು ನಿರ್ಭಾವುಕ ವೈಚಾರಿಕ ಪ್ರಬಂಧಗಳಿಗೆ ಸಮರ್ಥ ಪರ್ಯಾಯಗಳೆನಿಸುತ್ತವೆ.

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು