ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಂಪನ

ಸುರೇಶ ಸೋಮಪುರ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೦೫ ವೀಕ್ಷಣೆ ೦
ಬೆಲೆ
₹240
'ಕಂಪನ' ಕಾದಂಬರಿಯ ಮೂಲ ಹಿಂದಿ. ಸುರೇಶ ಸೋಮಪುರ ಅವರು ಹಿಂದಿ ಭಾಷೆಯಲ್ಲಿ ಬರೆದ ಈ ಕಾದಂಬರಿಯನ್ನು ಎಂ ವಿ ನಾಗರಾಜ ರಾವ್ ಅವರು ಕನ್ನಡಕ್ಕೆ ಅನುವಾದ ಮಾಡಿದ್ದಾರೆ. 'ಕಂಪನ' ಒಂದು ಭಯಾನಕ ಕಾದಂಬರಿ. ಇದರ ಕೆಲವು ಸಾಲುಗಳು... "ಕಿಟಕಿಯಿಂದ 'ಅನಿತಾ-ನಿವಾಸ'ವನ್ನು ನೋಡುತ್ತಿದ್ದಳು. ದೂರದಲ್ಲಿ ದೊಣ್ಣೆಯಿಂದ ಬಡಿಯುತ್ತಿದ್ದ ಸದ್ದು ಆಗಾಗ ಕೇಳಿಸುತ್ತಿತ್ತು. ಟಕ್-ಟಕ್ ಶಬ್ದಕ್ಕೆ ಪ್ರತಿಯಾಗಿ ಮತ್ತೆ ದೊಣ್ಣೆಯ ಶಬ್ದ ಟಕ್-ಟಕ್ ಕೇಳಿಬರುತ್ತಿತ್ತು. ಉಳಿದಂತೆ ಎಲ್ಲೆಡೆ ನೀರವತೆ.... ಅವಳು ಮಾತ್ರ ಕಿಟಕಿಯಿಂದ ರೆಪ್ಪೆ ಮುಚ್ಚದಂತೆ ಅನಿತಾ ನಿವಾಸದ ಕಡೆಯೇ ದಿಟ್ಟಿಸುತ್ತಿದ್ದಳು. ಸಮಯ ನಿಧಾನವಾಗಿ ಕಳೆಯುತ್ತಿತ್ತು. ಕಿಟಕಿಯಲ್ಲಿ ನುಸುಳುತ್ತಿದ್ದ ಬೆಳಕಿನಲ್ಲಿ ಎಲ್ಲವೂ ಭಯಾನಕವಾಗಿ ಕಾಣಿಸುತ್ತಿತ್ತು. ಚಿಕ್ಕ-ದೊಡ್ಡ ನೆರಳುಗಳು ಭೂತ-ಪ್ರೇತದಂತೆಯೇ ಭಯ ಹುಟ್ಟಿಸುತ್ತಿದ್ದವು. ಅವಳೂ ಕೆಲವೊಂದು ವಿಷಯಗಳನ್ನು ಓದಿದ್ದಳು. ಕೇಳಿದ್ದಳು. ಮೃತ್ಯುವಿಗೆ ಮೊದಲು-ಮೃತ್ಯುವಿನ ಅನಂತರ..... ಜನನ..... ಜೀವನ.... ಮೃತ್ಯು!!"

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬