ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕ್ಷಮೆ

ಸಹನಾ ವಿಜಯಕುಮಾರ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೫೧ ವೀಕ್ಷಣೆ ೨
ISBN
5551234105268
ಬೆಲೆ
₹234
ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸಹನಾ ವಿಜಯಕುಮಾರ್ ಇವರು ಮೂಲತಃ ಮೈಸೂರಿನವರು. ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷ ದುಡಿದ ಅನುಭವ. ೨೦೧೪ರಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದರು. ಸಹನಾ ವಿಜಯಕುಮಾರ್ ಇವರು ‘ಕನ್ನಡ ಪ್ರಭ’ ಪತ್ರಿಕೆಗೆ ಪ್ರತೀ ಮಂಗಳವಾರ ‘ಕನ್ನಡಿ’ ಎನ್ನುವ ಅಂಕಣ ಬರೆಯುತ್ತಿದ್ದರು. ಬಹಳಷ್ಟು ಮೆಚ್ಚುಗೆ ಪಡೆದ ಈ ಅಂಕಣವು ಪುಸ್ತಕ ರೂಪದಲ್ಲೂ ಲಭ್ಯವಿದೆ. ೨೦೧೬ರಲ್ಲಿ ‘ಕ್ಷಮೆ’ ಎನ್ನುವ ಕಾದಂಬರಿಯನ್ನು ಬರೆದರು. ಇದು ಇವರ ಚೊಚ್ಚಲ ಕಾದಂಬರಿ. ಪಲ್ಲವಿ ಮತ್ತು ಚೇತು ಎಂಬ ಎರಡು ಪ್ರಮುಖ ಪಾತ್ರಗಳನ್ನು ಹೊಂದಿರುವ ಈ ಕಾದಂಬರಿಯು ಪ್ರೀತಿ, ಆಕರ್ಷಣೆ, ಸ್ವಾತಂತ್ರ್ಯ ಮತ್ತು ಕ್ಷಮೆಯ ಮಹತ್ವದ ಕುರಿತಾದ ಸೂಕ್ಷ್ಮ ಭಾವನೆಗಳನ್ನು ಹೊಂದಿದೆ. ಪ್ರೇಮವೇ ಜೀವನದ ಸಾರ್ಥಕತೆಗೆ ಜೀವಾಳ, ಬದುಕಿನಲ್ಲಿ ಪ್ರೀತಿ ತಪ್ಪಿದರೆ ಯಾವುದಕ್ಕೂ ಕ್ಷಮೆ ಇರದು ಎಂಬ ಸುಂದರ ಸಂದೇಶವನ್ನು ಈ ಕೃತಿ ನೀಡುತ್ತದೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೮, ೨೦೨೬