ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗಲ್ಲುಗಂಬದ ಆತಂಕದಲ್ಲಿ

ಡಿ ವಿ ಗುರುಪ್ರಸಾದ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೬೩ ವೀಕ್ಷಣೆ ೦
ಬೆಲೆ
₹140
ಶಿಕ್ಷೆಯನ್ನು ಎದುರಿಸುತ್ತಿರುವ ಕೈದಿಗಳ ಮಾನಸಿಕ ಸ್ಥಿತಿಯೇನು? ನ್ಯಾಯಾಲಯವು ತಮಗೆ ಕೊಟ್ಟ ಶಿಕ್ಷೆಯ ಬಗ್ಗೆ ಅವರ ಅಭಿಪ್ರಾಯಗಳೇನು? ಅವರು ಈ ಶಿಕ್ಷೆಯು ಸಮರ್ಪಕವೆಂದು ಒಪ್ಪಿಕೊಳ್ಳುವರೇ ಇಲ್ಲವೇ ತಾವು ತಪ್ಪನ್ನೇ ಮಾಡಿಲ್ಲ, ತಮಗೆ ವಿನಾಕಾರಣ ಶಿಕ್ಷೆಯಾಗಿದೆ ಎಂದು ಹೇಳುತ್ತಾರೆಯೇ? ಇಂತಹ ಕೈದಿಗಳು ತಮಗೆ ಘೋರ ರೂಪದ ಶಿಕ್ಷೆಯಾಗಿದೆ ಎಂದು ಖಿನ್ನತೆಯಿಂದ ಕೊರಗುತ್ತಿದ್ದಾರೆಯೇ? ಈ ಶಿಕ್ಷೆಯ ಕಾರಣವಾಗಿ ದೈಹಿಕವಾಗಿ ಅವರಿಗೆ ಕಾಯಿಲೆಗಳು ಬಂದಿವೆಯೇ? ಎನ್ನುವುದನ್ನು ನಿರೂಪಿಸಿದ್ದೇನೆ. ಈ ಕೃತಿಯಲ್ಲಿ ಏಳು ಕಥೆಗಳಿವೆ. ಈ ಕಥೆಗಳಲ್ಲಿ ಬರುವ ಅಷ್ಟೂ ಕೈದಿಗಳನ್ನೂ ನಾನು ಭೇಟಿಯಾಗಲು ಸಾಧ್ಯವಾಗಿಲ್ಲ. ಅವರ ಕಥೆಗಳನ್ನು ಪೊಲೀಸ್ಅಧಿಕಾರಿಗಳ ಸಂದರ್ಶನಗಳು ಮತ್ತು ನ್ಯಾಯಾಲಯದ ಕಡತಗಳ ಮೂಲಕ ಸಂಗ್ರಹಿಸಿರುವೆ. ಹೀಗಾಗಿ ಈ ಕೃತಿಯಲ್ಲಿರುವ ಕಥೆಗಳು ಮೊದಲ ಕೃತಿಯಲ್ಲಿರುವ ಕಥೆಗಳಿಗಿಂತ ಭಿನ್ನವಾಗಿದೆ. ಈ ಕೃತಿಯಲ್ಲಿ ನಾನು ಭಾರತದ ಅಪರಾಧ ಚರಿತ್ರೆಯಲ್ಲಿ ಅತ್ಯಂತ ಹೀನ ಮತ್ತು ಭಯಂಕರವೆಂದು ಭಾವಿಸಲಾಗಿರುವ ಅಪರಾಧಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಿದ್ದೇನೆ.

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬