ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಗೃಹ ವೈದ್ಯ ಕೈಪಿಡಿ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೮೬ ವೀಕ್ಷಣೆ ೧
ಬೆಲೆ
₹40
'ಗೃಹವೈದ್ಯ' ಶಿಕ್ಷಣ ಶಿಬಿರ, ಇದು ಲೇಖಕರ ಹಲವು ದಿನಗಳ ಕನಸು. ಭಾರತದಲ್ಲಿ ಏಳು ಲಕ್ಷಗಳಿಗೂ ಮೀರಿ ಹಳ್ಳಿಗಳೇ ಇರುವಾಗ ಸರಕಾರ ಅಲ್ಲಿಗೆಲ್ಲ ಪದವೀಧರ ಡಾಕ್ಟರುಗಳನ್ನು ಅಥವಾ ತಜ್ಞ ವೈದ್ಯರುಗಳನ್ನು ನಿಯಮಿಸಬೇಕೆಂದರೆ ಅದು ಕಲ್ಪನೆಗೆ ಮೀರಿದ ವಿಚಾರವೇ, ಹೀಗಾಗಿ ಸಾಮಾನ್ಯ ಜನರಿಗೆ, ಗಿರಿಗುಡ್ಡಗಳಲ್ಲಿರುವ ನಿವಾಸಿಗಳಿಗೆ ವೈದ್ಯಕೀಯ ಸೌಲಭ್ಯ ದೊರಕುವುದು ಹೇಗೆ ? ಹಾಗಾದರೆ ರೋಗದಿಂದ ಪೀಡಿತರಾದ ಅವರೆಲ್ಲ ಅಲ್ಲಿಯೇ ನರಳುತ್ತಿರಬೇಕೇ ? ಅಥವಾ ಅವರು ಸುಸಜ್ಜಿತವಾದ ಆಸ್ಪತ್ರೆ ಗಳನ್ನು ಹುಡುಕಿಕೊಂಡು ಪಟ್ಟಣಗಳಿಗೆ ಬರಲು ಸಾಧ್ಯವೇ ? ಇವುಗಳನ್ನೆಲ್ಲ ಆಳವಾಗಿ ಪದ್ಯಾಲೋಚಿಸಿ ಲೇಖಕರು ಈ ಗೃಹವೈದ್ಯ ಶಿಕ್ಷಣದ ಒಂದು ಯೋಜನೆಯನ್ನು ರೂಪಿಸಿದೆ. ಅದರಲ್ಲಿ ಆರು ತಿಂಗಳ ಕಾಲದ ವಿಮಿತಿಯಲ್ಲೇ ಸುಲಭ ವೈದ್ಯಶಿಕ್ಷಣದ ಜೊತೆಗೇ ಯೋಗ ಶಿಕ್ಷಣ(ಯೋಗದಿಂದ ರೋಗ ಪರಿಹಾರ ಸಾಧ್ಯ)ವನ್ನೂ ಸೇವಾಮನೋಭಾವವುಳ್ಳ ಉತ್ಸಾಹೀ ತರುಣ ತರುಣಿಯರಿಗೆ ನೀಡಿ, ಅದೊಂದು ಸೇವಾವ್ರತಿಗಳ ಪಡೆಯನ್ನೇ ನಿರ್ಮಾಣ ಮಾಡಬೇಕು; ಶಿಕ್ಷಣ ಪಡೆದ ಅವರು ಗ್ರಾಮಾಂತರ ಪ್ರದೇಶಗಳಲ್ಲಿ ಬರಿಗಾಲ ವೈದ್ಯರಾಗಿ ಸಂಚರಿಸುತ್ತ ರೋಗಚಿಕಿತ್ಸೆಯನ್ನು ಮಾಡಬೇಕು ಎಂಬ ಕಲ್ಪನೆಯನ್ನಿಟ್ಟುಕೊಂಡು ಇದಕ್ಕೆ ಸಂಬಂಧಪಟ್ಟಂತೆ ಒಂದು ಯೋಜನೆಯನ್ನು ಸಿದ್ಧಗೊಳಿಸಿದರು. ಅದರ ಪ್ರತಿಫಲವೇ ಈ ಪುಸ್ತಕ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬