ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು

ವೈದೇಹಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೬೩ ವೀಕ್ಷಣೆ ೦
ಬೆಲೆ
₹150
ಸಮೃದ್ಧ ಅನುಭವ ಸುತ್ತಲಿನ ಜಗತ್ತಿನಲ್ಲಿ ಲವಲವಿಕೆಯ ಆಸಕ್ತಿಯಿರುವ ಮನುಷ್ಯ ನಿರೂಪಿಸಿದ ಪುಸ್ತಕಗಳಲ್ಲಿ ‘ನೆನಪಿನಂಗಳದಲ್ಲಿ ಮುಸ್ಸಂಜೆ ಹೊತ್ತು’ ಒಂದು. ಈ ಪುಸ್ತಕದ ಬರಹದಲ್ಲಿ ನಯ ನಾಜೂಕು, ಕಲೆ ಇಲ್ಲ. ನೇರವಾಗಿ ನಿರೂಪಣೆ. ಅನುಭವದಿಂದ ಎದ್ದು ಬಂದ ಚಿಂತನೆ. ಕಾರಂತರ ಅಪೂರ್ವ ಪ್ರಾಮಾಣಿಕತೆಯ ಶ್ರದ್ಧಾವಂತ ಜೀವನದ ಪರಿಚಯವಾಗುತ್ತದೆ. ಅಪೂರ್ವಜೀವನದ ನೆನಪುಗಳನ್ನು ನಮಗೆ ಒದಗಿಸುವ ಪುಸ್ತಕ. ‘ಸಮಾಜದ ಋುಣ ಹೇಗೆ ತೀರಿಸಿಯೇನು?’ ಎಂದು ಬಹುಶಃ ಕೋ.ಲ.ಕಾರಂತರು ಹೇಳಿಕೊಂಡರೆ ಅದು ಅವರ ಹಿರಿತನವನ್ನು ತೋರಿಸುತ್ತದೆ. ವೈದೇಹಿಯವರ ಸುಂದರ ನಿರೂಪಣೆ ಇದಾಗಿದೆ. ಶಿವರಾಮ ಕಾರಂತರ ಅಣ್ಣ ಲಕ್ಷ್ಮೀನಾರಾಯಣ ಕಾರಂತ ಅವರದೊಂದು ವಿಶಿಷ್ಠ ವ್ಯಕ್ತಿತ್ವ, ಬಹುಶಃ ಇಂದಿನ ತಲೆಮಾರಿನಲ್ಲಿ ಅಂತಹ ಅಸಾಧಾರಣ ಶಿಕ್ಷಕ, ಸಮಾಜ ಸೇವಕ, ಪ್ರಕೃತಿಪ್ರಿಯ, ವೈಜ್ಞಾನಿಕ ಮನೋಭಾವದವರು ತೀರಾ ವಿರಳ. ಸಂದ ಯುಗದವರ ನೆನಪುಗಳು ಸಾಧನೆಯ ಮೆಲುಕು, ಮೌಲಿಕ. ಅವುಗಳ ಒಂದು ಸಂಗ್ರಹ ಈ ಗ್ರಂಥ. - ಸಂತೋಷಕುಮಾರ ಗುಲ್ವಾಡಿ (‘ತರಂಗ’ದಲ್ಲಿ)

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು