ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೂಕ ಹಕ್ಕಿಯ ಹಾಡು

ಮುಖ್ತಾರ್ ಮಾಯಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೮೩ ವೀಕ್ಷಣೆ ೦
ಬೆಲೆ
₹110
ಮೂಕ ಹಕ್ಕಿಯ ಹಾಡು (ಆತ್ಮಕಥನ) ಕನ್ನಡಕ್ಕೆ ಡಾ. ಎನ್. ಜಗದೀಶ್ ಕೊಪ್ಪ ಪಾಕಿಸ್ತಾನದ ಹೆಣ್ಣು ಮಗಳು ಮುಕ್ತರ್ ಮಾಯಿಯ ಆತ್ಮಕಥನ `ಮೂಕ ಹಕ್ಕಿಯ ಹಾಡು’. ಡಾ. ಎನ್. ಜಗದೀಶ್ ಕೊಪ್ಪ ಅವರು ಆಂಗ್ಲ ಮೂಲದಿಂದ ಅನುವಾದಿಸುವ `ಮೂಕ ಹಕ್ಕಿಯ ಹಾಡ`” ಕೃತಿಯು ಮುಖ್ತಾರ್ ಮಾಯಿಯ ತೀರಾ ಭಿನ್ನವಾದ ದಾರುಣ ಬದುಕನ್ನು ನಮ್ಮ ಮುಂದೆ ತೆರೆದಿಡುವ ಕೃತಿಯಾಗಿದೆ. ಪಾಕಿಸ್ತಾನದ ಕೆಳವರ್ಗದ ಕೃಷಿ ಕುಟುಂಬದಲ್ಲಿ ಬೆಳೆದ ಅನಕ್ಷರಸ್ಥ ಹೆಣ್ಣು ಮಗಳು ಮುಖ್ತಾರ್ ಮಾಯಿ ಸಾಮೂಹಿಕ ಅತ್ಯಾಚಾರದಂತಹ ಕ್ರೌರ್ಯಕ್ಕೆ ಬಲಿಯಾದ ನಂತರ ಅನುಭವಿಸುವ ತೊಳಲಾಟಗಳನ್ನೆಲ್ಲಾ ಮೀರಿಯೂ ಆಕೆ ತೆಗೆದುಕೊಳ್ಳುವ ಪ್ರತಿಯೊಂದು ನಿರ್ಧಾರದ ಹಿಂದೆ ದೂರ ದೃಷ್ಟಿ ಮತ್ತು ಪ್ರಬುದ್ಧತೆ ಇದೆ.

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬