ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮೊಲೆವಾಲು ನಂಜಾಗಿ

ಮಲ್ಲಿಕಾರ್ಜುನ ಹಿರೇಮಠ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೨ ವೀಕ್ಷಣೆ ೦
ಬೆಲೆ
₹150
ಮೊಲೆವಾಲು ನಂಜಾಗಿ ಕತೆಗಳು ಶ್ರೀ ಮಲ್ಲಿಕಾರ್ಜುನ ಹಿರೇಮಠ ‘‘ಮೊಲೆವಾಲು ನಂಜಾಗಿ....’’ ಎಂಬ ಈ ಕಥಾ ಸಂಕಲನದ ತಲೆ ಬರಹವನ್ನು ಅವರು ಬಸವಣ್ಣನವರ ಒಂದು ವಚನದಿಂದ ಆಯ್ದುಕೊಂಡಿದ್ದಾರೆ. ಅಲ್ಲದೆ ಆ ಹೆಸರಿನ ಕಥೆಯೊಂದು ಈ ಸಂಕಲನದ ಕೇಂದ್ರದಲ್ಲಿಯೇ ಇದೆ. ‘‘ಅವನತಿ’’ ಕಥೆಯು ಮೇಲ್ನೋಟಕ್ಕೆ ಒಂದು ಗ್ರಾಮೀಣ ಪ್ರದೇಶದಲ್ಲಿಯ ಕಾಲೇಜಿನಲ್ಲಿ ನಡೆಯುವ ವಿದ್ಯಮಾನದಂತೆ ತೋರುತ್ತದೆ. ‘‘ತಯಾರಿ’’ ಕಥೆಯು  ಹೆಚ್ಚು ಜಟಿಲವಾಗಿದ್ದು ಕಥೆಯು ಸ್ತ್ರೀ ಕೇಂದ್ರಿತವಾಗಿದೆ. ವಿಧವೆಯೊಬ್ಬಳು ಮರುಮದುವೆಯಾಗಿದ್ದಾಳೆ. ಅವಳ ಮನೆಯವರ ವಿರೋಧದಿಂದಾಗಿ ಮತ್ತು ಗಂಡನ ತಂದೆ-ತಾಯಿಗಳಿಗೆ ಈ ಮದುವೆ ಸ್ವೀಕೃತವಾಗಿಲ್ಲವಾದುದರಿಂದ, ಪ್ರೀತಿಯ ಆಧಾರವೊಂದರಲ್ಲಿಯೇ ಅವರು ಬಾಳಬೇಕಾಗಿದೆ. ಆದರೆ ಪ್ರೀತಿಯೊಂದೇ ಆಧಾರವಾಗಿ ಬಾಳಬೇಕಿದ್ದ ಮಹಿಳೆಯು ತನ್ನ ಗಂಡನನ್ನೇ ಅರ್ಥಾತ್ ತನ್ನ ಪ್ರೀತಿಯನ್ನೇ ಕಳೆದುಕೊಂಡಾಗ ಬದುಕಲು ಅವಳು ಮಾಡಿಕೊಳ್ಳಬೇಕಾದ ಸಿದ್ಧತೆಯೇ ಈ ಕಥೆಯ ವಸ್ತು. ಸಂಕಲನದ ಕೊನೆಯ ಕಥೆ ‘‘ಮಾಗಿ’’ ಸ್ವಲ್ಪ ದೀರ್ಘವಾದ ಕತೆಯೆ. ಮೂವರು ಮಿತ್ರರು ಒಂದು ಪ್ರವಾಸದಲ್ಲಿ ತಮ್ಮನ್ನೇ ತಾವು ಗುರುತಿಸಿಕೊಳ್ಳುವ ವಿಧಾನವನ್ನು ಕುರಿತು  ಕಥೆಯು ಚಿಂತಿಸುತ್ತದೆ.

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬