ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರಾಜತರಂಗಿಣಿ ಕಥಾವಳಿ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ರಾಜತರಂಗಿಣಿ ಕಥಾವಳಿ

ತೆಲುಗು ಮೂಲ: ಕಸ್ತೂರಿ ಮುರಳೀಕೃಷ್ಣ ಕನ್ನಡಕ್ಕೆ: ಎಸ್. ಆರ್. ರಾಮಸ್ವಾಮಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೫೫ ವೀಕ್ಷಣೆ ೦
ಬೆಲೆ
ರೂ. ೧೩೫.೦೦ ಮೊದಲ ಮುದ್ರಣ: ೨೦೨೦
ಸಂಸ್ಕೃತಸಾಹಿತ್ಯದಲ್ಲಿ ಒಂದು ಅನನ್ಯವಾದ ಕಾವ್ಯ, ಕಶ್ಮೀರದ ಕಲ್ಹಣನ ರಾಜತರಂಗಿಣಿ. ಕ್ರಿ.ಶ. 11ನೇ ಶತಮಾನಕ್ಕೆ ಹಿಂದೆ ಕಶ್ಮೀರವನ್ನು ಆಳಿದ ಎಲ್ಲ ಮಹಾರಾಜರ ವೃತ್ತಾಂತಗಳಿಗೆ ನಮಗೆ ಇರುವ ಏಕೈಕ ಆಕರ ಈ ಕಾವ್ಯ. ಪ್ರಭುತ್ವಕೇಂದ್ರಿತ ಮತ್ತು ರಾಜಕೀಯ ಘಟನಾವಳಿಗಳಲ್ಲದೆ ಸಂಗತ ಸ್ಥಲಪುರಾಣ ಜಾನಪದೀಯಾದಿ ಮೂಲಗಳ ಕಥನಗಳನ್ನೂ ಸಾಮಾಜಿಕ ಜೀವನದ ಸೀಳುನೋಟವನ್ನೂ, ಬೌದ್ಧಮತ ಪ್ರವರ್ತಕರಿಗೂ ಸನಾತನಧರ್ಮಾನುಯಾಯಿಗಳಿಗೂ ನಡುವಣ ಮುಖಾಮುಖಿಯ ಅನೇಕ ವಿವರಗಳನ್ನೂ ಕಲ್ಹಣನು ಇಲ್ಲಿ ಸಂಗ್ರಹಿಸಿಕೊಟ್ಟಿದ್ದಾನೆ. ಹೀಗೆ ಈ ಕಾವ್ಯ ಎಲ್ಲ ದೃಷ್ಟಿಗಳಿಂದಲೂ ಸ್ವಾರಸ್ಯಗಳ ಗಣಿಯಾಗಿದೆ. ಕಲ್ಹಣನ ರಾಜತರಂಗಿಣಿಯಲ್ಲಿ ಅಲ್ಲಲ್ಲಿ ಬರುವ ಅತಿ ಸಂಕ್ಷಿಪ್ತ ಪ್ರಸ್ತಾವಗಳನ್ನು ಆಧಾರವಾಗಿರಿಸಿಕೊಂಡು ಅವಕ್ಕೆ ವಿಸ್ತೃತ ಕಥಾರೂಪವನ್ನು ಕೊಟ್ಟು ಪ್ರಕೃತ ಮಾಲಿಕೆ ಯನ್ನು ಕಸ್ತೂರಿ ಮುರಳೀಕೃಷ್ಣ ಅವರು ಸಿದ್ಧಪಡಿಸಿದ್ದಾರೆ. ಹಲವೊಮ್ಮೆ ಮೂಲದಲ್ಲಿ ನಾಲ್ಕೋ ಆರೋ ಸಾಲುಗಳಷ್ಟು ಇರುವ ಸಾಮಗ್ರಿಯು ಈ ಮಾಲಿಕೆಯಲ್ಲಿ ಪೂರ್ಣಪ್ರಮಾಣದ ಸ್ವತಂತ್ರ ಕಥಾಸರಣಿಯಾಗಿ ವಿಸ್ತಾರಗೊಂಡಿದೆ. ಹೀಗೆ ಈ ಮಾಲಿಕೆಯಲ್ಲಿ ಇರುವವು ರಾಜತರಂಗಿಣಿ-ಆಧಾರಿತ ಸ್ವತಂತ್ರ ಕಥಾನಕಗಳು.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

ಮುದ್ರಾ ಪ್ರವೇಶ

ಕೆ. ರಂಗರಾಜ ಅಯ್ಯಂಗಾರ್

ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು

೧೬೯

ಗುಡ್ ಬೈ ಆಸ್ತ್ಮ

ಕಾಕುಂಜೆ ಕೇಶವ ಭಟ್ಟ

ಸಾಹಿತ್ಯ ಸಿಂಧು ಪ್ರಕಾಶನ, ಬೆಂಗಳೂರು

೧೬೬