ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಷಟ್ಕರ್ಮವಿಧಿ

ತಿರುಕ - ಶ್ರೀ ರಾಘವೇಂದ್ರ ಸ್ವಾಮೀಜಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೨೬೨ ವೀಕ್ಷಣೆ ೩
ಬೆಲೆ
₹36
ಷಟ್ಕರ್ಮವು ಹಠಯೋಗಿಗಳಿಗೆಂದು ಮಾತ್ರ ಹೇಳಿದ ಶಾಸ್ತ್ರವಲ್ಲ. ಮೋಕ್ಷಸಾಧನೆಗೆ ಇದು ಬೇಕು, ನಿಜ; ಆದರೆ ಅನೇಕ ಕಠಿಣ ರೋಗಗಳನ್ನು ಬೇರೆ ಔಷಧೋಪಚಾರಗಳಿಲ್ಲದೆ ಗುಣಪಡಿಸಿಕೊಳ್ಳುವುದಕ್ಕೆ ದೇಹದ ಬಲಸಂವರ್ಧನಕ್ಕೆ, ಮಾನಸಚೇತನದ ಶಕ್ತಿ ಸಂಚಯನಕ್ಕೆ ಇದು ಬಹು ಪ್ರಯೋಜನಕಾರಿ. ಇದನ್ನು ಎಲ್ಲರೂ ಮಾಡಲು ಸಾಧ್ಯವಷ್ಟೇ ಅಲ್ಲ, ಮಾಡಬಹುದು, ಮಾಡಬೇಕು, ಮಾಡಲೇಬೇಕು ಎನ್ನುತ್ತಾರೆ ಮಲ್ಲಾಡಿಹಳ್ಳಿ 'ತಿರುಕ' ಸ್ವಾಮಿಜಿಯವರು. ಕ್ಲಿಷ್ಟ ವಾದುದನ್ನೂ ಕಠಿಣವಾದುದನ್ನೂ ಬಿಡಿಸಿ ಆಬಾಲಗೋಪಾಲರಿಗೂ ಮನದಟ್ಟಾಗುವಂತೆ ಹೇಳುವ ಅವರ ಶೈಲಿಯಲ್ಲಿ ಸರಳತೆಯ ಶಕ್ತಿಯಿದೆ, ಸ್ವಾನುಭವದ ಅಧಿಕಾರವಿದೆ, ರಹಸ್ಯತಮವಾದುದನ್ನೂ ಬಿಚ್ಚಿ ಹೇಳುವ ಲೋಕಾನುಕಂಪವಿದೆ, ಯೋಗಶಾಸ್ತ್ರ-ವೈದ್ಯಶಾಸ್ತ್ರ ಉಪದೇಶ ಸಾಮರ್ಥ್ಯಗಳ ಸಂಗಮವಿದೆ.

ಕೊನೆಯ ನವೀಕರಣ: ಆಗಸ್ಟ್ ೦೪, ೨೦೨೬