ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸರದಿ
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

ಸರದಿ

ನಾ. ದಾಮೋದರ ಶೆಟ್ಟಿ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೭೦ ವೀಕ್ಷಣೆ ೦
ಬೆಲೆ
₹70
ಸರದಿ ಡಾ.ನಾ. ದಾಮೋದರ ಶೆಟ್ಟಿ ಅವರ ‘ಸರದಿ’ ಕಾದಂಬರಿಯು ಆಧುನಿಕತೆ ಮತ್ತು ಜಾಗತಿಕರಣದ ಪರಿಣಾಮವಾಗಿ ನಮ್ಮ ಸಾಂಪ್ರದಾಯಿಕ ಕುಟುಂಬ ವ್ಯವಸ್ಥೆ ಸಾಗುತ್ತಿರುವ ದಾರಿ ಎಲ್ಲೆಡೆಯೂ ಅಭಯಾಶ್ರಮದ ಕಡೆ ಚಲಿಸುತ್ತಿರುವ ದೃಶ್ಯಗಳನ್ನು ಚಿತ್ರಿಸುತ್ತದೆ. ಈ ಎಲ್ಲ ಸಂದರ್ಭಗಳಲ್ಲಿ ಆಶ್ರಮ ಸೇರುತ್ತಿರುವವರೆಲ್ಲಾ ಹೆಂಗಸರು ಮತ್ತು ತಾಯಂದಿರು ಎನ್ನುವುದು ವಿಶೇಷವಾದುದು. ಈ ಕಾದಂಬರಿಯು ಕುಟುಂಬ ಮತ್ತು ತಾಯಿಯನ್ನು ಕೇಂದ್ರವಾಗಿ ಇಟ್ಟುಕೊಂಡು ಈ ಕಾಲದ ಭಿನ್ನ ಅನನ್ಯತೆಗಳ ನಡುವಿನ ಸಂಘರ್ಷ ಮತ್ತು ಅದರಿಂದ ಸಂಭವಿಸುವ ನೋವು, ಅದನ್ನು ನಿವಾರಿಸಲು ಮಾಡುವ ಪ್ರಯತ್ನಗಳು – ಹೀಗೆ ಅನೇಕ ಸಂಗತಿಗಳನ್ನು ಚರ್ಚಿಸುತ್ತದೆ. ವಿಶೇಷವಾಗಿ ಜಾಗತೀಕರಣದ ಇಂದಿನ ಸನ್ನಿವೇಶದಲ್ಲಿ ಸಂಸ್ಕೃತಿಯ ಮಿಶ್ರಣ ಮತ್ತು ಹೊಂದಾಣಿಕೆ ಹೇಗೆ ಸವಾಲಿನದು ಎನ್ನುವ ಕಾಳಜಿ ಈ ಕಾದಂಬರಿಯ ಮುಖ್ಯ ತಿರುಳು. ಬದುಕು ಮತ್ತು ಬರಹದಲ್ಲಿ ಸದಾ ಭಿನ್ನ ಸಂಸ್ಕೃತಿಗಳ ಒಡನಾಟವನ್ನು ಪಾಲಿಸಿಕೊಂಡು ಬಂದ ನಾ.ದಾಮೋದರ ಶೆಟ್ಟಿ ಅವರು ಈಗ ಅದಕ್ಕೆ ಕಾದಂಬರಿಯ ರೂಪ ಕೊಟ್ಟಿರುವುದು ಮಹತ್ವದ ಸಾಧನೆ.

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬