ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಸ್ಪೂಕಿ ಎಂಬ ಹಾವು ಮತ್ತು ಫ್ಯಾಸಿಸ್ಟ್ ಅಪ್ಪ

ಲೋಹಿತ್ ನಾಯ್ಕರ
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೪೦ ವೀಕ್ಷಣೆ ೦
ಬೆಲೆ
₹70
ಲೋಹಿತ್ ನಾಯ್ಕರ್ ಅವರು ವೃತ್ತಿಯಿಂದ ನ್ಯಾಯವಾದಿಗಳು. ಅವರಿಗೆ ಮಾನವ ಹಕ್ಕುಗಳ ವಿಷಯದಲ್ಲಿ ವಿಶೇಷ ಆಸಕ್ತಿ. ಅವರ ಹಿಂದಿನ ಎರಡು ಕಥಾ ಸಂಕಲನಗಳಲ್ಲಿ ಕಾಣಿಸಿಕೊಂಡಿದ್ದ ಈ ಆಸಕ್ತಿ ಈ ಸಂಕಲನದಲ್ಲೂ ಮುಂದುವರೆದಿದೆ. ಮಾನವ ಹಕ್ಕುಗಳಿಗೆ ಸಂಬಂಧಿಸಿದ ಸಂದರ್ಭ ಒಂದೆಡೆ ಕಾಯಿದೆ ದೃಷ್ಟಿಯಿಂದ ಸಮಸ್ಯೆಗಳಾಗಿದ್ದರೆ, ಇನ್ನೊಂದೆಡೆ ನೈತಿಕ ದೃಷ್ಟಿಯಿಂದ ಸಮಸ್ಯೆಗಳಾಗಿವೆ. ಈ ಸಂದಿಗ್ಧತೆಯನ್ನು ಲೋಹಿತ್ ಅವರ ಸಣ್ಣಕತೆಗಳು ಸಮರ್ಥವಾಗಿ ಚಿತ್ರಿಸುತ್ತವೆ. ಹಾಗೆಂದು ಇವು ಮಾನವ ಹಕ್ಕುಗಳು ಮತ್ತು ಜೀವನ ಸಂದರ್ಭಗಳ ಸಮಸ್ಯಾತ್ಮಕತೆಯನ್ನು ಉದಾಹರಿಸುವ ಕೇಸ್ ಹಿಸ್ಟರಿಗಳಲ್ಲ. ಸಮಸ್ಯೆಗಳ ಹಿಂದಿನ ತೊಡಕಾದ ಮಾನವೀಯ ಸಂಬಂಧಗಳ ಸಹನುಭುತಿಪರವಾದ ತಿಳುವಳಿಕೆಯೊಂದಿಗೆ ಹದವಾದ ಸೃಜನಶೀಲತೆಯನ್ನು ಮೇಳೈಸಿಕೊಂಡ ವಿಶಿಷ್ಟ ಬರಹಗಳಾಗಿವೆ. ಕಾಯಿದೆಯ ತಿಳುವಳಿಕೆಯೊಂದೇ ಇವುಗಳ ಹೆಚ್ಚಳವಲ್ಲ.ಅದಕ್ಕೆ ಲೋಹಿತ್ ಅವರು ತೋರಿರುವ ಸಹಜ ಸೃಜನಶೀಲತೆ ಮತ್ತು ಬದುಕಿನ ಅರ್ಥಪೂರ್ಣತೆಯ ಬಗೆಗಿನ ಕಳಕಳಿ ಮಹತ್ವದವಾಗಿವೆ. ವೈವಿಧ್ಯಪೂರ್ಣವಾದ ಸಂದರ್ಭ, ಪರಿಸರ, ಜೀವನನಿರೀಕ್ಷಣೆ, ಪ್ರಯೋಗಶೀಲತೆಗಳು ಈ ಕತೆಗಳ ಹರವನ್ನು ಹೆಚ್ಚಿಸಿವೆ. ಸೃಜನಶೀಲತೆಯ ಕೈ ಮೇಲಾಗಿ, ಸಮಸ್ಯೆಗಳು ಧ್ವನಿಪೂರ್ಣ ಬರಹಗಳಾದಾಗ ಅವರ ಕತೆಗಳು ಹೆಚ್ಚು ಯಶಸ್ವಿಯಾಗಿವೆ. ಹಾಗಾಗಿ ಇವು ಸಾಹಿತ್ಯಕವಾಗಿಯೂ ಕುತೂಹಲಕರ ಪ್ರಯೋಗಗಳಾಗಿವೆ .

ಕೊನೆಯ ನವೀಕರಣ: ನವೆಂಬರ್ ೦೫, ೨೦೨೬