ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Hindu Veera Sanyasi Swamy Vivekananda
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Hindu Veera Sanyasi Swamy Vivekananda

Gb Harish
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೮೩ ವೀಕ್ಷಣೆ ೦
ISBN
9789391852238
ಪುಟಗಳು
೧೫೨
ಬೆಲೆ
₹180
ಹಿಂದೂ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದ ಅದೊಂದು ಶಕ್ತಿ. ಮಿಂಚಿನ ಸೆಳಕು. ಭಾರತದ ಆಗಸದಲ್ಲಿ ಕೋರೈಸಿದ ಸಿಡಿಲಮರಿ. ಭಾರತಾಂಬೆಯ ಚೈತನ್ಯವನ್ನು ಜಗದಗಲ ಪರಿಚಯಿಸಿದ ಬ್ರಹ್ಮಕ್ಷತ್ರಿಯ. ಕಾವಿಬಟ್ಟೆಯಲ್ಲಿ ಉದಿಸಿದ ಕ್ರಾಂತಿಕಾರಿ. ಸ್ವಾಮಿ ವಿವೇಕಾನಂದರು ಯುಗಕ್ಕೊಮ್ಮೆ ಅವತರಿಸುವ ದಿವ್ಯಪ್ರಸಾದ. ಅವರು ಶ್ರೀ ರಾಮಕೃಷ್ಣರ ಸಂಪರ್ಕಕ್ಕೆ ಬಂದುದು, ತಾಯಿ ಶಾರದಾದೇವಿಯ ಆಶೀರ್ವಾದ ಪಡೆದುದು, ದೂರದ ಚಿಕಾಗೋದಲ್ಲಿ ನಡೆಯುತ್ತಿದ್ದ ವಿಶ್ವಧರ್ಮಸಮ್ಮೇಳನಕ್ಕೆ ಹೋಗಲು ಪ್ರೇರಣೆ ಪಡೆದುದು, ಭಾರತದ ಉದ್ದಗಲಕ್ಕೆ ಓಡಾಡಿ, ಅಕ್ಷರಶಃ ಪರಿವ್ರಾಜಕರಾಗಿ ಜನಮಾನಸವನ್ನು ಅರಿತದ್ದು ಇದೆಲ್ಲವೂ ಪವಾಡಸದೃಶ. ಅಷ್ಟು ಚಿಕ್ಕ ಜೀವನದಲ್ಲಿ ಇಷ್ಟೆಲ್ಲವನ್ನು ಮಾಡಲು ಸಾಧ್ಯವೇ ಎಂದರೆ, ಚಿಕ್ಕದಿದ್ದುದು ಆಯುಸ್ಸು ಮಾತ್ರ, ಜೀವನವಲ್ಲ - ಎಂಬ ಸಂದೇಶವಾಗಿ ಬದುಕಿದವರು ಸ್ವಾಮಿ ವಿವೇಕಾನಂದರು. ಅವರು ಹೋದಲ್ಲಿ ಮಿಂಚಿನ ಸಂಚಾರ, ಅವರು ನುಡಿದಲ್ಲಿ ಅಮೃತಬಿಂದು. ವಿವೇಕಾನಂದರು ಕೊಲಂಬೋದಿಂದ ಅಲ್ಮೋರದವರೆಗೆ ಭಾರತದ ನೆಲದಲ್ಲಿ ಓಡಾಡಿದರು. ಜನರಲ್ಲಿ ಆತ್ಮಶಕ್ತಿಯನ್ನು ಉದ್ದೀಪಿಸಿದರು. ಸ್ವಾತಂತ್ರ್ಯಹೋರಾಟದಲ್ಲಿ ತನ್ನದೇ ಆದ ಯೋಗದಾನ ಮಾಡಿದರು. ನಿರಂತರವಾಗಿ ಉಪನ್ಯಾಸವಿತ್ತರು. ಬರೆದರು, ಮಠ ಕಟ್ಟಿದರು. ಮುಂದೆ ಹುಟ್ಟಿಬಂದ ಸಹಸ್ರಾರು ಬಾಳುಗಳಿಗೆ ಬೆಳಕಾದರು. ಅವರೊಂದು ಸ್ವಯಂಪ್ರಭೆಯ ದಿವ್ಯಮಣಿ! ಸ್ವಾಮಿ ವಿವೇಕಾನಂದರ ಕುರಿತು ಕನ್ನಡದ ಹಿರಿಯ ಚಿಂತಕ, ವಾಗ್ಮಿ ಡಾ. ಜಿ.ಬಿ. ಹರೀಶ ಅವರು ಬರೆದಿರುವ ಅಪರೂಪದ ಕೃತಿ ಇದು.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೪

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧