ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕಾಡೊಳಗೆ 36 ಗಂಟೆಗಳು

ಗಿರಿಮನೆ ಶ್ಯಾಮರಾವ್
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೨೬ ವೀಕ್ಷಣೆ ೧
ISBN
9789385378225
ಆವೃತ್ತಿ
4
ಬೆಲೆ
₹200.00
ಗಿರಿಮನೆ ಶ್ಯಾಮರಾವ್ ಅವರ “ಮಲೆನಾಡಿನ ರೋಚಕ ಕತೆಗಳು” ಸರಣಿಯ ಹದಿನಾರನೇ ಪುಸ್ತಕವೇ “ಕಾಡೊಳಗೆ ೩೬ ಗಂಟೆಗಳು". ಈಗಾಗಲೇ ೧೫ ಪುಸ್ತಕಗಳು ಈ ಸರಣಿಯಲ್ಲಿ ಪ್ರಕಟವಾಗಿದ್ದರೂ ಎಲ್ಲಿಯೂ ರೋಚಕತೆಗೆ ಕಡಿಮೆಯಾಗದಂತೆ ಓದುಗರನ್ನು ಮುಂದಿನ ಸರಣಿ ಪುಸ್ತಕಕ್ಕೆ ಕಾಯುವಂತೆ ಮಾಡುವುದೇ ಗಿರಿಮನೆಯವರ ಬರವಣಿಗೆಯ ಹೆಗ್ಗಳಿಕೆ ಎಂದರೆ ತಪ್ಪಾಗಲಾರದು. ಕಾಡಿನ ಪರಿಸರದಲ್ಲೇ ಬಹಳಷ್ಟು ವರ್ಷಗಳನ್ನು ಕಳೆದ ಗಿರಿಮನೆಯವರಿಗೆ ಅಲ್ಲಿಯ ಕಥೆಗಳನ್ನು ಬಹಳ ಸೊಗಸಾಗಿ, ರಸವತ್ತಾಗಿ ಹೇಳುವ ಕಲೆ ಕರತಲಾಮಲಕವಾಗಿದೆ. ‘ಕಾಡೊಳಗೆ ೩೬ ಗಂಟೆಗಳು’ ಕೃತಿಯ ಬಗ್ಗೆ “ಬುದ್ಧಿ ಇದ್ದರೂ ಬದುಕು ಮತ್ತು ಕಾಡಿನ ಅನುಭವವಿಲ್ಲದ ಯುವತಿಯೊಬ್ಬಳು ಡ್ರಗ್ಸ್ ಜಾಲದ ಹಿಂದೆ ಬಿದ್ದ ಪರಿಣಾಮ ಜೀವಭಯದಿಂದ ಗುರುತು ಪರಿಚಯ ಇಲ್ಲದ ಒಬ್ಬಾತನೊಂದಿಗೆ ಅಕಸ್ಮಾತ್ತಾಗಿ ಪಶ್ಚಿಮಘಟ್ಟದ ಕಾಡೊಳಗೆ ಧುಮುಕಬೇಕಾಗಿ ಬಂದು ಅಲ್ಲೇ ಮೂವತ್ತಾರು ಗಂಟೆ ಕಳೆಯಬೇಕಾದಾಗ ಎದುರಿಸುವ ವಿಲಕ್ಷಣ ಸನ್ನಿವೇಶಗಳ ಚಿತ್ರಣ ಈ ಕಾದಂಬರಿಯದು, ಒಂದು ಕಡೆ ಜೀವ ಭಯ. ಜೊತೆಗೇ ಕಾಡಿನ ಭಯ. ಮತ್ತೊಂದು ಕಡೆ ರಕ್ಷಕನೇ ಭಕ್ಷಕನಾದರೆ ಎಂಬ ಆತಂಕದ ಭಯ. ಎಲ್ಲದರ ಜೊತೆ ಅನಿವಾರ್ಯವಾಗಿ ಕಳೆಯಬೇಕಾದ ಕ್ಷಣಗಳು ಅವಳನ್ನು ಹೈರಾಣಾಗಿಸುತ್ತದೆ. ತನ್ನ ಕಷ್ಟಕ್ಕೊದಗಿದಂತೆ ಕಾಣುವ ಆತ ಯಾರು? ಆತನ ಉದ್ದೇಶ ಏನು? ಸತ್ಯ ತಿಳಿಯುವವರೆಗೆ ಎಲ್ಲವೂ ನಿಗೂಢವಾಗಿಯೇ ಉಳಿಯುತ್ತದೆ ಅವಳಿಗೆ. ಇದು ಮಲೆನಾಡಿನ ರೋಚಕಕತೆಗಳ ಸರಣಿಯ ಹದಿನಾರನೆಯ ಭಾಗ, ಸರಣಿ ಮುಂದುವರೆಯುತ್ತಲೇ ಇದೆ. ಓದುಗರೇ ಇಲ್ಲ ಎಂದು ಅಲವತ್ತುಕೊಳ್ಳುವ ಕಾಲದಲ್ಲಿ ಈ ಸರಣಿಯ ಪುಸ್ತಕಗಳನ್ನು ಲಕ್ಷಗಟ್ಟಲೆ ಜನ ಕೊಂಡು ಓದುತ್ತಿದ್ದಾರೆ ಎಂದರೆ ಬರಹಗಾರನಿಗೆ ಅದಕ್ಕಿಂತ ದೊಡ್ಡದು ಯಾವುದೂ ಇಲ್ಲ. ಇನ್ನೂ ಹೆಚ್ಚು ನಿರೀಕ್ಷಿಸಿದರೆ ಅದು ಮಿತಿ ಮೀರಿದ ದುರಾಸೆ” ಎಂದಿದ್ದಾರೆ ಗಿರಿಮನೆಯವರು.

ಕೊನೆಯ ನವೀಕರಣ: ಅಕ್ಟೋಬರ್ ೦೭, ೨೦೨೬