ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Makkaligagi Sri Gurunathara Kategalu
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Makkaligagi Sri Gurunathara Kategalu

Rashmi Manjunath Jois
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೧೨ ವೀಕ್ಷಣೆ ೦
ISBN
9789348731616
ಪುಟಗಳು
೭೨
ಬೆಲೆ
₹120
ಮೈಸೂರು, ಬೆಂಗಳೂರು ಹಾಗೂ ಮಲೆನಾಡಿನ ಪ್ರಾಂತ್ಯಗಳು ಅಂದರೆ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗದ ಭಾಗಗಳಲ್ಲಿ ಗುರುನಾಥರ ಹೆಸರು ಕೇಳದವರಿಲ್ಲ. ಹಾಗೆಂದ ಮಾತ್ರಕ್ಕೆ ಅವರ ಮಹಿಮೆ ಅಥವಾ ಕಾರ್ಯಕ್ಷೇತ್ರ ಇಷ್ಟೇ ಜಿಲ್ಲೆಗಳಿಗೆ ಸೀಮಿತ ಎಂದೂ ಸಹ ಅರ್ಥವಲ್ಲ. ಇತರ ರಾಜ್ಯಗಳು, ಹೊರದೇಶಗಳಲ್ಲೂ ಗುರುನಾಥರ ಭಕ್ತರು, ಶಿಷ್ಯರು ಇಂದಿಗೂ ಪ್ರತೀ ಕ್ಷಣ ಅವರನ್ನು ನೆನೆಯುತ್ತಾ, ಅವರ ಚೈತನ್ಯದ ಜೊತೆ ಬದುಕುತ್ತಿದ್ದಾರೆ. ಯಾವುದೇ ಕಾರ್ಯಕ್ರಮದಲ್ಲಿ, ಹಬ್ಬ-ಹರಿದಿನಗಳಂದು ನಾಲ್ಕು ಜನ ಬಂಧುಮಿತ್ರರು ಒಂದೆಡೆ ಸೇರಿದಾಗ, ಗುರುನಾಥರ ಬಗ್ಗೆ, “ಓ ಗುರುನಾಥರಾ, ನಾನು ಇವತ್ತು ಈ ಸ್ಥಿತಿಯಲ್ಲಿರಲು ಅವರೇ ಕಾರಣ”, “ನಾನು ಇಂದು ಬದುಕಿದ್ದೇನೆ ಎಂದರೆ ಅವರ ಭಿಕ್ಷೆ”, “ಇಂದು ನಾನು ಸಾಲದಿಂದ ಮುಕ್ತನಾಗಿ, ನನ್ನ ಸ್ವಂತ ಮನೆಯಲ್ಲಿ ನೆಮ್ಮದಿಯಿಂದ ಇದ್ದೇನೆ ಎಂದರೆ ಅವರ ಕಾರುಣ್ಯವೇ ಕಾರಣ”, “ನನಗೆ ಇಂತಹ ಖಾಯಿಲೆ ಬಂದಿತ್ತು, ಗಂಭೀರ ಸ್ಥಿತಿ ಅಂತ ವೈದ್ಯರು ಹೇಳಿದ್ದರು, ಇವತ್ತು ಅದೆಲ್ಲಾ ಸರಿಯಾಗಿ ಆರೋಗ್ಯ ಕರುಣಿಸಿದವರು ಅವರೇ”, “ದಾರಿ ತಪ್ಪಿದ್ದ ನಮ್ಮ ಮಗನನ್ನು ತಿದ್ದಿ ಒಳ್ಳೆ ದಾರಿಗೆ ತಂದವರು ಅವರೇ” ಎಂದು, ಹೀಗೆ ಪ್ರತಿಯೊಬ್ಬರೂ ಅವರವರ ಅದ್ಭುತ ಅನುಭವಗಳನ್ನು ಹೇಳಿಕೊಳ್ಳುವವರೇ. ಒಬ್ಬೊಬ್ಬರ ಅನುಭವಗಳೂ ಒಂದೊಂದು ವಿಸ್ಮಯವೇ. ಅವರು ವಿಶ್ವವ್ಯಾಪಿಯಾದ ನಂತರವೂ ಇಂದಿಗೂ ತಮ್ಮ ಲೀಲಾವಿಶೇಷಗಳನ್ನು ಮುಂದುವರೆಸುತ್ತಿದ್ದು, ಅಪಾರ ಭಕ್ತವೃಂದವನ್ನು ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಸುತ್ತಿರುವುದನ್ನು ಕಾಣಬಹುದು. ಗುರುಗಳ ಮಹಿಮೆ ಸಾರುವ ಕೆಲವು ಸಂದರ್ಭಗಳನ್ನು ಮಕ್ಕಳಿಗಾಗಿ ಈ ಹೊತ್ತಿಗೆಯಲ್ಲಿ ಕೊಡಲಾಗಿದೆ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೦

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೩

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೦