ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

Sahyadriya Sereyalli
✓ ವಿನಂತಿ ದಾಖಲಾಗಿದೆ. ಲಭ್ಯವಾದಾಗ ಸಂಪರ್ಕಿಸುತ್ತೇವೆ.

Sahyadriya Sereyalli

Ganesha Bhat Koppalathota
/ 5 · ರೇಟಿಂಗ್ ಇನ್ನೂ ರೇಟಿಂಗ್ ಇಲ್ಲ
೧೭೮ ವೀಕ್ಷಣೆ ೦
ISBN
5551234126559
ಬೆಲೆ
₹450
ಸಮುದ್ರತೀರದಿಂದ ಕಾಣುವ ಈ ಪಶ್ಚಿಮಘಟ್ಟಗಳ ಸಾಲಿನ ದೃಶ್ಯವೇ ಅದ್ಭುತ! ಒಂದೆಡೆ ಹಸುರಾದ ಮರಗಿಡಗಳನ್ನು ಹೊತ್ತ ಬೆಟ್ಟ. ಇನ್ನೊಂದೆಡೆಯಲ್ಲಿ ವಿಶಾಲವಾದ ಜಲರಾಶಿ. ಅದನ್ನು ನೋಡುತ್ತ ಕುಳಿತರೆ ಬೇರೆ ಯಾವ ಜಗತ್ತೂ ನೆನಪಿಗೆ ಬರುವುದಿಲ್ಲ. ಹೊರಗಡೆ ಕಾಣುವುದು ನಮ್ಮ ಅಂತರಂಗವೇ ಆಗಿದೆ. ಒಂದು ಕಡೆ ಪ್ರಕ್ಷುಬ್ಧವಾದ, ಚಂಚಲತೆಯಿಂದ ಕೂಡಿದ ಹೊಯ್ದಾಡುವ ತೆರೆಗಳು, ಇನ್ನೊಂದು ಕಡೆ, ಅಚಲವಾಗಿ, ಭೂಮಿಯನ್ನೇ ಸ್ಥಿರವಾಗಿ ಹಿಡಿದುಕೊಂಡಿರುವ ಪರ್ವತರಾಶಿ. ಒಂದು ಕಡೆ ಮನಸ್ಸಿನಲ್ಲೂ ಹೀಗೇ ಹೊಯ್ದಾಟ, ಅದೆಲ್ಲಕ್ಕೂ ಬೆನ್ನು ಮಾಡಿ ನಿಂತರೆ ಬೆಟ್ಟದಷ್ಟು ಗಟ್ಟಿತನ! ಯಾವುದು ಸತ್ಯ, ನಾವು ಯಾವುದರ ಕಡೆ ಮುಖ ಮಾಡಿ ನಿಂತಿದ್ದೇವೋ ಅದೇ ಸತ್ಯ!""ಸಹ್ಯಾದ್ರಿಯ ಸೆರೆಯಲ್ಲಿ" ಇದು ಸ್ವಾತಂತ್ರ್ಯಕ್ಕೂ ಪೂರ್ವದಲ್ಲಿ ನಡೆದ ಮಲೆನಾಡಿನ ಸಣ್ಣ ಹಳ್ಳಿಗಳ ಕೆಲವು ವ್ಯಕ್ತಿಗಳ ಜೀವನ, ಅವರ ಅಂತರಂಗದ ತುಮುಲಗಳ ಜೊತೆಯಲ್ಲಿ ಸಾಗುವ ಕಥೆ. ಆ ಕಾಲದ ಸಾಮಾಜಿಕ- ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಒಂದೆರಡು ವರ್ಷಗಳ ಕಾಲಘಟ್ಟದಲ್ಲಿ ನಡೆಯುವ ಬದಲಾವಣೆಗಳು, ಅದರಿಂದ ಅವರ ಜೀವನದಲ್ಲಿ ನಡೆದ ಘಟನೆಗಳ ಚಿತ್ರಣ. ಆತ್ಮೀಯರ ಅಗಲುವಿಕೆ. ಜೀವನಾನುಭವದಿಂದ ಬದಲಾಗುವ ಮನಸ್ಥಿತಿಗಳು, ಸ್ವಾತಂತ್ರ್ಯಸಂಗ್ರಾಮದ ಬಿಸಿ, ಹಳ್ಳಿಯ ಜನರ ನಂಬಿಕೆಗಳು, ಸಂಪ್ರದಾಯವನ್ನು ಮೀರುವ ಕ್ರಾಂತಿಕಾರಕ ಮನೋಭಾವ, ಪಟ್ಟಣದ ಜೀವನ. ನಾಟಕರಂಗದ ಅನುಭವಗಳು ಹೀಗೆ ಹತ್ತಾರು ಸ್ತರಗಳಲ್ಲಿ. ಮಲೆನಾಡಿನ ಹಳ್ಳಿಯಿಂದ ಬೊಂಬಾಯಿ-ಬೆಂಗಳೂರುಗಳ ತನಕ ಹರಿಯುತ್ತಾ ಆ ಕಾಲವನ್ನು ಅನ್ವೇಷಿಸುತ್ತದೆ ಈ ಕಾದಂಬರಿ.

ಕೊನೆಯ ನವೀಕರಣ: ಸೆಪ್ಟೆಂಬರ್ ೨೭, ೨೦೨೬

ಪುಸ್ತಕ ಸಂಪದದಿಂದ — ಮನೆಗೇ ತಲುಪಿಸುತ್ತೇವೆ

ಎಲ್ಲ ಪುಸ್ತಕಗಳು

ಇದೇ ಪ್ರಕಾಶನದ ಇತರ ಪುಸ್ತಕಗಳು

Bhoomigondu Yelle Ellide

Narayana Shevire

ಅಯೋಧ್ಯಾ ಪಬ್ಲಿಕೇಷನ್ಸ್

೧೩೩

Belaku Ondu Ilege Bandu

Prakash Malpe

ಅಯೋಧ್ಯಾ ಪಬ್ಲಿಕೇಷನ್ಸ್

೧೪೭

Makkaligagi Dr Apj Abdul Kalam Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೮೫

Makkaligagi Lal Bahadur Shashtri Kathegalu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೨೫೧

Emergency - Samvidhanada Kolege Nadeda Sanchu

Rohith Chakrathirtha

ಅಯೋಧ್ಯಾ ಪಬ್ಲಿಕೇಷನ್ಸ್

೧೭೧