ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಆಗು

ಉಚ್ಚಾರಣೆ: āgu
ಮೂಲ: Ka. D333

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಹುಟ್ಟು.
    2. ಜರುಗು.
    3. ಬೆಳೆ.
    4. ಪಾಲಿಗೆ ಬರು.
    5. ಪರಿಣಮಿಸು.
    6. ಇರು.
    7. ನೆರವೇರು.
    8. ಒಳಹೋಗು.
    9. ಒಪ್ಪು.
    10. ಇಷ್ಟವಾಗಿರು.
    11. ತೀರು.
    12. ಸೇರಿರು.
    13. (ಸ್ಥಿತಿಯನ್ನು) ಹೊಂದು.
    14. ದೊರಕು.
    15. ನೆರವಾಗು.
    16. ನಿರ್ಮಾಣವಾಗು.
    17. ದಕ್ಕು.

  2. 2.

    1. ಆಗುವಿಕೆ.
    2. ಲಾಭ.
    3. ಅಭಿವೃದ್ಧಿ.

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    the fact of becoming, happening or being accomplished.

  2. 2.
    verb

    to become; to happen; to occur; to be born.

  3. 3.
    noun

    profit; success; favourableness.

  4. 4.
    verb

    to come about; to happen; to take place.

  5. 5.
    verb

    to grow or develop (oneself).

  6. 6.
    noun

    improvement in the state of being; prosperity.

  7. 7.
    noun

    ಆಗುಮಾಡಿಸು āgu māḍisu to cause to be executed, performed, accomplished or conducted; to bring about; ಆಗುಮಾಡು āgu māḍu to create; to cause to be available; 2. to take into one's hand and control. 3. to cause to be accomplished, conducted; to bring about.

  8. 8.
    verb

    to happen to be the share, profit of.

  9. 9.
    verb

    to turn out to be; to result in.

  10. 10.
    verb

    to be.

  11. 11.
    verb

    to be accomplished; to be completed.

  12. 12.
    verb

    to agree with; to befit; to be commensurate with.

  13. 13.
    verb

    to suit; to be proper.

  14. 14.
    verb

    to be affectionate; to be the object of another's love; to be liked.

  15. 15.
    verb

    to be possible; to be affordable.

  16. 16.
    verb

    to be related to; to be connected to or with.

  17. 17.
    verb

    to attain; to gain; to get.

  18. 18.
    verb

    to become available; to be got.

  19. 19.
    verb

    to help; to assist; to stand by; to support.

  20. 20.
    verb

    to be constructed; to be manufactured.

  21. 21.
    verb

    to remain; to last relatively longer.

  22. 22.
    verb

    ಆಗದವನು āgadavanu he who is not in good terms with another; one who is disliked; 2 a man who dislikes, hates or envies; ಆಗ(ದ)ಹೋಗದ ಮಾತು āga(da) hōgada mātu a suggestion, advice, etc. that is not practical or not useful in real situations; ಆಗಬೇಕು ಅಂತ ಇತ್ತು āgabēku anta ittu (a saying) 'something has come to happen, and there was no other way it could have happened'; 2. it was destined to happen; ಆದದ್ದು ಆಗಿಹೋಯಿತು ādaddu āgihōyitu (saying) 'forget about unpleasant things that have happened in the pasṭ; ಆಗದಿರು āgadiru to be in bad terms; to be hateful; 2. to be alien to one's taste; ಆಗಲಿ āgali a word conveying consent; 'yeś; 'okay'; ಆಗಲೀಸು āgalīsu may it happeṇ; 2. to allow to happen; ಆಗಿ āgi a reflexive suffix to denote 'oneself', ' on one's own' (ಅವನಾಗಿ, ನಾನಾಗಿ often with emphasis as in ಅವನಾಗಿಯೇ. ನಾನಾಗಿಯೇ); ಆಗಿಬರು āgibaru to be or become auspicious or favourable; ಆಗಿರು āgiru (third person, singular) to be; ಆಗಿಹೋಗು āgi hōgu to be over; to be completed; to be finished. 2. to be exhausted; ಆದದ್ದಾಗಲಿ ādaddāgali let whatever happen; let anything befall; ಆದರೂ ādarū albeit; despite; even then; although; notwithstanding; ಆದರೆ ādare but - a) on the contrary; b) yet; still; however, even then; ಆದರೆ ādare if it (so) happens; ಆದಷ್ಟು ādaṣṭu as much as possible; to the maximum extent; ಆದಷ್ಟುಮಟ್ಟಿಗೆ ādaṣṭu maṭṭige to the extent possible; as far as possible; ಆದುದರಿಂದ ādudarinda because of (that); for what happened; ಆದುದರ್ಕೆ ādudarke = ಆದುದರಿಂದ; ಆದೊಡೆ ādoḍe if it (so) happens; 2. if it happens; 3. even then; albeit; but; ಆದ್ದರಿಂದ āddarinda = ಆದುದರಿಂದ; ಅಪ್ಪಿನಂ appinam till it becomes, happens; ಅಪ್ಪಿನೆಗಂ appinegam = ಅಪ್ಪಿನಂ; ಅಪ್ಪುದರಿಂ appudarim on account of that; because of that; since it is being so; ಅಪ್ಪುದರಿಂದ appudarinda = ಅಪ್ಪುದರಿಂ: ಅಪ್ಪೊಡೆ appoḍe if it becomes, happens; ಆದರೆ ಹೋದರೆ, ಹತ್ತಿ ಬೆಳೆದರೆ ಅಜ್ಜಿ ನಿನಗೊಂದು ಪಟ್ಟೆ ಸೀರೆ ādare hōdare, hatti beḷedare a jji ninagondu paṭṭe sīre (prov.) if wishes were horses, beggars would ride; ಆಗುವುದು ಬಿಡುವುದು ದೇವರಿಚ್ಛೆ, ಮಾಡುವುದು ಬಿಡುವುದು ನನ್ನಿಚ್ಛೆ āguvudu biḍuvudu dēvara icche, māḍuvudu biḍuvudu nannicche do all you can and leave the rest to Providnce; ಆದರೆ ಒಂದು ಅಡಕೆ ಮರ, ಹೋದರೆ ಒಂದು ಗೋಟಡಿಕೆ ādare ondu aḍake mara, hōdare ondu gōṭaḍike (said of taking chances) hesitate not to stake a buck to get a billion; ಆಗಿಹೊದದ್ದಕ್ಕೆ ಅತ್ತು ಫಲವೇನು? āgi hōdaddakke a ttu phalavēnu no use in crying about the spilt milk; ಆಗುವವರೆಗೆ ಇದ್ದು, ಆರುವವರೆಗೆ ಇರಲಾರದೆಹೋಗು āguvavarege iddu, āruvavarege iralāradehōgu though waited till last stage, to become impatient at the last moment; ಆದ ಹಾಗೆ ಆಗಲಿ ಮಾದಪ್ಪನ ಜಾತ್ರೆ āda hāge āgali mādappana jātre (said as a suggestion) do what thou ought, let come what may; 2. (said about something which is being done mechanically) do without being keen or do nothave interest about its effectiveness.

ಕಿಟ್ಟೆಲ್ ನಿಘಂಟು

  1. 1.
    1.

    = ಅಕ್ 2, ಆಗು 1. to become manifest; to come into being or existence (ಪ್ರಾದುರ್ಭಾವ Śmd. Dh.; T., M., Tu. ಆವು Te. ಅವು). 2, to take place, to come about or to pass, to happen; to be made. 3, to grow. 4, to happen to; to accrue to; to fall to the share of. 5, to become; to prove to be. 6, to be going to. 7, to be (see espec. also the use of ಅಪ್ಪ and ಅಹ). 8, to be effected or done; to be finished; to elapse, to go. 9, to find room for entering; to enter; to come under. 10, to be comely, suitable or fit; to agree; to be used. 11, to be practicable; to be possible. 12, to be related. relative participles of the present ಅಪ, ಅಪ್ಪ, ಅಹ, ಆಗುವ relative participle of the past ಆದ (Śmd. 289; see ಆ9,- ಆನ 1). [ಇನ್ತುದಾತ್ತ ನಾರಾಯಣನಾದ ದೇವನೆಮಗೀಗರಿಕೇಸರಿ ಸೌಖ್ಯ ಕೋಟಿಯಂ Pb. 1, 1; ತನಗಾದ ಅಗೇನು ಅವರಿಗಾದ ಚೇಗೇನು Bv. 248; ಅಯ್ಯಾ ತನುಶುದ್ಧನಾಗಿ ಇಷ್ಟಲಿಂಗವ ಪೂಜಿಸಬೇಕು Cv. 148]. regular old 3rd person neuter sing. of the present ಆದಪುದು (Bp. 45, 4; J. 28, 48); ಆದಹುದು e. g. Bp. 56, 31; ಆದುಹುದು (in Nr.). 3rd pers. masculine sing. of the imperfect ಆದಂ (Śmd. 289); 3rd pers. neuter sing. of the same ಆದುದು [ಪಾದದೊಳೆರಡನೆಯಕ್ಕರಮಾದರದಿನ್ದಾದುದಾವುದದನ/?/ದನಿತಂ Kr. 2, 32; Ap. 1, 39]. (289; Bp. 43, 72), ಆದತ್ತು (226; Bp. 43, 73), ಆಯ್ತು (289; Bp. 41, 71), ಆಯಿತ್ತು (226 Cm.; 249 Cm.: Bp. 9, 16; 11, 42; 43, 71; 47, 60; 55, 44), ಆಯಿತು (Bp. 2, 24; 17, 4; 49, 27; B. 2, 24; 3, 100; C.). ಆದೀತು (B. 2, 39; Si. 469. 470). as to the old future see ಅಕ್ಕು 6, ಅಕ್ಕುಂ, ಅಪ್ಪ, ಅಹ and as to the old 3rd p. of the imperative see ಅಕ್ಕೆ 3. ಅವನಾನೊಬ್ಬ ವಿಪ್ರನು ನಿದ್ರೆಗೆಯ್ಯುತ್ತಿರಲು ನೇಸ/?/ ಅಸ್ತಮಯಮ್ ಆದುಹುದು, ಆ ಇಬ್ಬರು ತ/?/ವಾಯಿನ ಅಭಿನಿರ್ಮುಕ್ತನು ಅಭ್ಯುದಿತನು ಎನಿಸುಗು (Nr.). ತನ್ನನ್ನು ಏತಕ್ಕೆ ತಿನ್ನದೆ ಆಯ್ತು (Bp. 48, 13). ಇವಳ್ಗೆ ವರನ್ ಆಗಬೇಕು (J. 29, 30). ಹ್ರಸ್ವಮ್ ಆದ ಎ ಒ (Śmd. 27). ಯಮಕವ್ಯವಹೃತಿಗೆ ಆಗವು (27). ಏನಾಯಿತು ? (84). ಆದಲ್ಲಿ (93). ಆ ಕಬ್ಬಕ್ಕೆ ಈ ಕಬ್ಬಮ್ ಆಯ್ತು (159). ಆದವಿಷ್ಣು (90. 201). ಈ ಕವಿಗಳ್ ಆದಿಯಾದ ಮತ್ತಂ ಪಲಮ್ಬರ್ ಪ್ರಸಿದ್ಧಕವಿಗಳ ಉದಾಹರಣಂಗಳ್ (5). ಮೊ/?/ಗು ಮೊದಲಾದ ಪಲ ತೆ/?/ದ ಧ್ವನಿಗಳ್ (26). ಮನಂ ಸಂಚಲಮ್ ಆದುವು (168). ಪಿರಿಯವು ದಿವಸಂಗಳ್ ಆದುವು (119). ಆದುದಿಲ್ಲ (296). ಪೋಲಿಸುವೆಡೆಗೆ ಆದುವು (251). ಕಥೆಗಳ್ ಆದವು (Bp. 18, 108: are the tales finished ?). ಊಟ ಆಯಿತು (C.). ಮೆಯ್ ನೆ/?/ಯಲ್ ಆದವಳು (ನಗ್ನಿಕೆ Hlā., Nr.). ಹತ್ತಿಯಿನ್ದ ಆದ ಸೀರೆ (ಕಾರ್ಪಾಸ etc. Hlā.). ಸಮಾಸ ಹಿರಿದಾದ ಹಲವು ಪದಂಗಳು (ದಣ್ಡಕ Hlā.). ಅವನಿನ್ದೆ ಆದ ಇನಿತು ವೃತ್ತಾನ್ತವನ್ ಅ/?/ದು (Bp. 28, 17). ಆಗದು, ಅಯ್ಯೋ, ತಮ್ಮ ಕೆಯ್ಯಲಿ (46, 23). ಅದು ಆ ಪೆಟ್ಟಿಗೆಯೊಳಗೆ ಆಗುವುದಿಲ್ಲ (S. Mhr.). ಕರಿಯ ಕಾಲ್ಗೆ ಒಳಗಾದನೊ ? (Rśv. 13, 103). ಬಾಲಮೃಗಮ್ ಒಳಗೆ ಆಯ್ತು (Bh. 2, 13, 13). ಆದಷ್ಟು ಆಯಿತು, ಬ/?/ಡೆಮ್ಮೇ ಹಾಲು. -ಆಗೋದು ಹೋಗೋದು ದೇವರ ಇಚ್ಛೆ, ಹೂಡೋದು ಬಿತ್ತೋದು ನನ್ನ ಇಚ್ಛೆ. -ಮಾಧವರಾಯನ ಪೂಜೆ ಯಾವಾಗಲಾದರೂ ಆಗಲಿ! ಊದುವ ಶಂಖಾ ಊದಿ ಬಿಡು! -ಆಗೋ ಪೂಜೆ ಆಗುತ್ತಿರಲಿ! ಊದೋ ಶಂಖಾ ಊದಿ ಬಿಡುವ (Prvs.). ಮದಿವಾದೆನು (Dp. 4). ಅವನು ನನಗೆ ಏನೂ ಆಗುವದಿಲ್ಲ he is in no way related to me (C.). ಶತ್ರುವಿನ ದೆಸೆಯಿನ್ದ ಕ್ಷೀಣವಾಗಲ್ ಪಟ್ಟನ್ಥಾದು (ಕ್ಷಿತ etc. Dhw.). ಅ/?/ಕೆ ಆಗಲ್ ಪಡುವದು (ಬುದ್ಧ Si. 383). ಆಟ್ಟಿಗೆಯಲಾದ ಮನೆ (ಪ್ರಾಸಾದ Mr. 192). ಮಣ್ಣಿನ್ದ ಮತ್ತೂ ಏನೇನು ಆಗುತ್ತವೆ ? (B. 1, 1). ಈ ಊರಿಗೆ ದೊರೆಗಳು ಬನ್ದು ಎಷ್ಟು ದಿವಸ ಆಯಿತು ? (1, 7). ಇನ್ಥಾ ಹಣ್ಣು ಹಮ್ಪಲಗಳನ್ನು ಒಬ್ಬನೇ ಕೂತು ತಿನ್ನುವ ಹಾಗೆ ನನಗೆ ಆಗುವದಿಲ್ಲ (1, 8). ಬೆಳಗಾಂವೀ ಜಿಲ್ಲೆಯಲ್ಲಿ...ಉತ್ಕೃಷ್ಟವಾದ ಮಾವಿನ ಹಣ್ಣುಗಳು ಆಗುತ್ತವೆ (2, 52). ಅವನಿಗೆ ಬಹಳ ದ್ರವ್ಯವಾಯಿತು (C.). ಒನ್ದು ತಿಂಗಳು ಮನುಷ್ಯರಿಗೆ ಆಗೆ ಪಿತೃಗಳಿಗೆ ಅದು ಒನ್ದು ದಿವಸಂ (Mr. 71). ತುರಗವರ್ಣಂ ಬಿಳಿಯದು ಆಗೆ ಕರ್ಕಮ್ ಅದು ಅಕ್ಕು (Mr. 275). [ಆಗ. -ಅ 6. that should not be. (cf. ಆಗದು) ಇದಂ ಕಡೆಗಣಿಸಲಾಗ Pb. 7, 37]. ನಮ್ಮಿನ್ದ ಆಗದು (B. 3, 2). [ಬೆರೆಸಿರೆ ಕನ್ನಡದೊಳೆ ಬನ್ಧರಮಾಗದು ಕಾವ್ಯರಚನೆ Kr. 1, 53; Pb. 1, 75; Ap. 1, 5]. ಆದದ್ದು ಆಯಿತು what is done is done (B. 3, 100). ಆಗಗೊಡು. -ಕೊಡು to allow to become (B. 5, 89); to allow to happen to (5, 260). ಆಗದ. ಆಗದ (not coming about) ಹೋಗದ ಬದುಕಿಗೆ ರಾಗಿ (a desirer) ಯಾಕೆ? -ಆಗದು (impossible) ಕಾರ್ಯಕ್ಕೆ ಆಶೆ ಪಟ್ಟರೆ ಸುಗುವದಿಲ್ಲ, ಹೋಗುವದಿಲ್ಲ (Prvs.). ಆಗದವನು an unfriendly, inimical man (C.; Bp. 60, 10). ಕೆಲಸಕ್ಕೆ ಆಗದವನು a man incompetent for work (C.). ಆಗದು is often used in the sense of: it is unfit, it is improper, it is forbidden (ನಿಷೇಧ Nr.). [T., ಕಾದು M., Tu., ಆವಾನ್ದು Te. ಅಕಾದು]. ಪೊನ್ನ ಅನ್ದಳಮ್ ಎನ್ದು, ಇನ್ತು ಸನ್ಧಿಯಂ ಕೆಡಿಸಲ್ ಆಗದು (Śmd. 75). ಶ್ರುತಿಕಷ್ಟಮ್ ಆಗೆ ಸನ್ಧಿಯಂ ಕೆಡಿಸಲ್ ಆಗದು (76). ಆ ಸಮಸಂಸ್ಕ್ರತಂ ಗಳನ್ ಅಚ್ಚಗನ್ನಡದೊಳ್ ಬೆರಸಿ ಸಮಾಸಂ ಮಾಡಲ್ ಆಗದು (98). ಶ್ರುತಿಕಷ್ಟಮ್ ಆಗೆ ಸನ್ಧಿಯಂ ಮಾಡಲ್ ಆಗದು (296). ಕ್ಷತ್ರಿಯನು ಯತಿ ಆಗಲ್ ಆಗದು (Hlā). ಹಗೆಯ ಹೆಣ್ಗಳನಮನೆಗಳೊಳು ಪೊಗಿಸಲ್ ಆಗದು (Bh. 1, 8, 35). see Bp. 3, 72. 79. 84; 9, 9; 10, 4; 11, 5; 14, 8; 23, 29; 28, 39; 37, 13; 43, 52; 44, 64; 50, 22; etc.; 60, 38. ಆಗಲಿ may (he, she, it, they) become or be, etc.; be it (so), very well ! (ಮತ Nr.). ಆಗಲಿ (Bp. 11, 28; 22, 38; 31, 11; 50, 40). ಚನ್ದ್ರಹಾಸನ್ ಎನ್ದು, ಇಳೆಯೊಳಗೆ ಈತಂಗೆ ಹೆಸರ್ ಆಗಲಿ (J. 28, 60). ಬಲ್ಲಿದಂ ತಾನ್ ಆದಡೆ ಆಗಲಿ! ಖುಲ್ಲಬೇಡನನ್ ಆವ ತೆ/?/ದಿಂ ಕೊಲ್ಲದೆ ಎನ್ತು ಇಹೆಂ (Bp. 18, 37; cf. v. 44). ಆದದ್ದು ಆಗಲಿ (B. 4, 63). the repetition of ಆಗಲಿ is used to express: whether — either — ಯುದ್ಧ ಮಾಡುವದಕ್ಕಾಗಿ ಮಣ್ಟಪದ ಮೇಲ್ಗಡೆಯಾಗಲಿ ಕೋಟೆಕೊತ್ತಳದ ಮೇಲ್ಗಡೆಯಾಗಲಿ ಉಪ್ಪರಿಗೆಯ ಹಿನ್ದುಗಡೆಯಾಗಲಿ ಕಟ್ಟಿರುವ ಮನೆ (ಅಟ್ಟ Si. 110). ಮರಗಳ ಹೊದ/?/ಗಳಲ್ಲಿ ಆಗಲಿ ಹಾ/?/ಗೋಡೆಯ ಬಿರುಕುಗಳಲ್ಲಿ ಆಗಲಿ ಗೂಡು ಕಟ್ಟಿ (B. 2, 2). ಅಂಗಳದಲ್ಲಾಗಲೀ ಹಿತ್ತಲಲ್ಲಾಗಲೀ ಹೊಲಸು ಇರಗೊಡಬಾರದು (4, 25). ನೆಣ್ಟರ ಮನೆಯಲ್ಲಿ ಸೇರಿ ಕೊಣ್ಡು ಆಗಲಿ ಹಿರಿಯರ ಗ/?/ಕೆಯಿನ್ದ ಆಗಲಿ ಉದರನಿರ್ವಾಹ ಸಾಗಿಸುವರು (4, 194). ಮನುಷ್ಯರನ್ನಾಗಲಿ ಕ/?/ಗಳನ್ನಾಗಲಿ ನುಂಗುವವು (2, 27). ಅಗಲಾಗಲಿ rep. ಆಗಲಿ (Bp. 24, 17). ಆಗಲಾಗು. ಆಗಲ (i. e. ಆಗಲ್ಕೆ) ಆಗು (Bp. 56, 31; 61, 13). ಆಗಲೆವೇ/?/. ಆಗಲ್-ಎ3-ಬೇ/?/ it is indeed to be, it must be (Bp. 24, 7). ಆಗಾಗು rep. ಪರದೇಶದ ಜನರ ಪ್ರವೇಶವು ಈ ದೇಶದಲ್ಲಿ ಹೆಚ್ಚು ಆದ ಆದ ಹಾಗೆ (B. 4, 114). ಹೀಗೆ ಆಗುತ್ತಾಗುತ್ತಾ ಕೆಲವು ದಿವಸಗಳ ಮೇಲೆ (5, 57). [2, to join. ಆಯತ ಲಿಂಗದಲ್ಲಿ ಆಗಾಗಿ ಭಕ್ತನೆನಿಸುವನಯ್ಯಾ Cv. 1047]. ಆಗಿ having become, having happened, being finished or done, etc. a few peculiarities with regard to this participle are 1, it is used where a state or quality is to be expressed (instead of the simple is; cf. the use of ಅಪ್ಪ, ಅಹ and ಆದ), e. g. ಕರ್ಣಾಟಕಭಾಷೆಯೊಳ್ ಮಹಾಪ್ರಾಣಂಗಳ್ ನಿಜೋಜ್ವಲಮ್ ಆಗಿ ಒಳವು (Śmd. 23; cf. sūtra 15). ಶುದ್ರಕನೃಪತಿ ಸುಖಾಸೀನನ್ ಆಗಿರ್ದನ್ ಆಗಳ್ (297). ಶೂದ್ರನು ಗೃಹಸ್ಥನೆ ಆಗಿರ್ಪನು (Hlā.). ನಸುಗೆಮ್ಬಾಗಿರ್ದುದು ಕಪಿಶಮ್ ಎಮ್ಬುದು (Hlā). ಲೆಸಾಗಿರ್ಪುದು (ಸೌಷ್ಢವ etc Hlā.). ವಿದಗ್ಧೆಯುಂ ಮುಗ್ಧೆಯುಮ್ ಆಗಿರ್ಪವಳು (ವಾಣಿನಿ Hlā.). ಮುನ್ನೆ ಇದ್ದ ಕಾಡು ಎಲ್ಲಂ ನಾಡಾಗಿ ಇರ್ದುದು (J. 29, 32). ನಮ್ಮಿರ್ವರೊಳ್ ಗುಪ್ತಮ್ ಆಗಿರಲಿ (29, 39). ಆತಗೆ ನಾರಿಯಾಗಿ ಇಹಳ್ ಒಬ್ಬ ಮಾನಿನಿ, ಮೋಹಿನೀದೇವಿ (Prll. 3, 7). ಅವಳ್ಗೆ ಸನ್ತತಂ ಮನ್ತ್ರಿಸುತೆ ವಿಷಮೆ ಸಖಿಯಾಗಿ ಇರ್ಪಳ್ (J. 30, 1). ಆಭರಣವಾಗಿರುವ ಭಂಗಾರ (ಶೃಂಗಿಕನಕ Si. 331). ಬಹಳ ಅಧಿಕವಾಗಿರುವದು (ಅತಿರಿಕ್ತ 373). it is also classical and idiomatic to dispense with both ಆಗು and ಇರು in such cases, if suitable (examine e. g. some of the instances s. ಅವ and ಅವಳ್). in the S. Mhr. country and My. (also Bp. 29, 28), however, there occur forms like the following: ಚನ್ದವದೆ (B. 2, 29), ಸವಿ ಇರುತ್ತದೆ (2, 32), ಸುಳ್ಳುನಿದ್ಧಾನೆ (2, 34), ಹಗೆಗಳಿದ್ದವರು (2, 36), ಬಡವನಿದ್ಧಾನೆ (2, 38), ಎತ್ತರ ಇರುತ್ತದೆ (2, 41; p. 26 ಉದ್ದವಾಗಿ ಇರುತ್ತದೆ, ಸೂಕ್ಷ್ಮ ಇರುತ್ತದೆ) ಸೂಕ್ಷ್ಮ ಇರುವದ/?/ದ (2, 48), ತಕ್ಕದಿದ್ದರೆ (3, 5), ಬಣ್ಣದವು ಇರುತ್ತವೆ (3, 16), ಕಪ್ಪು ಇರುವದ/?/ನ್ದ (3, 24), ಉಪವಾಸವಿರುತ್ತವೆ (3, 40; see s. ಉಪವಾಸ), ಗಟ್ಟಿ ಇರುವದ/?/ನ್ದ (3, 55), etc., etc. 2, it is used to form adverbs (in which case it may originally have been ಆಗೆ, so that it becomes; cf. ಅಗೆ 4; T. ಆಗ), e. g. ಚಿಕ್ಕಣಮಾಗಿ ಮಾಡಿದಂ, ಸಣ್ಣಮಾಗಿ ತು/?/ದಂ (Śmd. I). ಸ್ಥಿರಮಾಗಿ ಸ್ನೇಹಂ ಮಾ/?/ವನು (ನೀಲೀರಾಗ Hlā.). ವ್ಯಕ್ತವಾಗಿ ನುಡಿಯಲ್ ಅ/?/ಯದಾತ (ಲೋಹಲ etc. Hlā.). ಹಿರಿದಾಗಿ ಪೀಡಿಸುವುದು (ಸಪತ್ರಾಕರಣ Hlā.). ಎರಡಾಗಿ (Bp. 42, 4). ನಿಶ್ಚಯವಾಗಿ (ದಲ್ Śmd. 24 Cm.). ವನ್ನಾಗಿ (ಆಯ್ದೆ 26 Cm.; ನೆ/?/ 31 Cm.). ವೆಗ್ಗಳವಾಗಿ (ಮೊಕ್ಕಳಂ 168 Cm.; ಕೆನ್ನಂ 295 Cm.). ಲೇಸಾಗಿ (ಸಂ 161 Cm.). ಮೃದುವಾಗಿ (Bp. 21, 10). ಸ್ವಚ್ಛವಾಗಿ, ಸಲುವಾಗಿಯೇ (B. 1, 24). ಬಹುತ?ರವಾಗಿ (2, 26; 4, 157). ಸಣ್ಣಾಗಿ (4, 140. 148). ಅಗಲಾಗಿ (157). 3, it is used to convey the idea of voluntarily, of itself, of one's own accord, e. g. ತಾನಾಗಿ ಬೆಳೆಯುವ ಯಜ್ಞ ಭತ್ತ (Si. 307). ಅವನಾಗಿ or ತಾನಾಗಿ ಬನ್ದನು he came of his own accord (C.); and 4, with the Dative, that of for, on account of, in behalf of, e. g. ನಿನಗಾಗಿ (Bp. 26, 55; cf. 38, 65). ಶೋಧಕ್ಕಾಗಿ (B. 4, 91). ತನ್ದೆಯ ಮಾತಿಗಾಗಿ (J. 31, 34). 5, occasionally it may be translated by as, e. g. ಒನ್ದನ್ನು ಮತ್ತೊನ್ದನ್ನು ಆಗಿ ತಿಳಿದು ನಮ್ಬುವಿಕೆ (Si. 48). ಎಡದ ಕೆಯ್ಯೆತ್ತಿದರೆ ಬಲದ ಭುಜದ ಮೇಲೆ ಕೊರಳಿಗೆ ಹಾರವಾಗಿ ನಿಲ್ಲುವ ಅಪಸವ್ಯಮ್ ಆದ ಜನಿವಾರ (252). 6, when in narration it is joined to ಅನ್ತು this ಆನ್ತಾಗಿ (Bp. 57, 66; 60, 36. 59) means such being the case, under such circumstances; and when in narration it occasionally joins the infinitive with final ಅಲ್ (ಅಲು) it is so to say ornamental or rather superfluous, e. g. ಆಗೆ (Śmd. 3) is said to mean ಅಗಲಾಗಿ by the Cm.; ಹೊರಳುತಿರಲಾಗಿ (Bp. 56, 56); ಕೊಣ್ಡಾಡುತಿರಲಾಗಿ (57, 9); ಮಾಡುತ್ತಿರಲಾಗಿ (B. 5, 123). see also Bp. 57, 17. 21. 56; 60, 35. ಆಗಿ ಬರು to suit, to agree, as water, food, etc. (C.); to be congenial (C). ಆಗಿಯುಂ. -ಉಂ 1. ದೀರ್ಘಮ್ ಆಗಿಯುಂ (Śmd. 53). ಮೀನ್ ಆಗಿಯುಮ್ ಎಸಡಿಯಾಗಿಯುಮ್ ಏನ್ ಆಗಿಯುಂ ತಾನ್ ಎಲ್ಲಂ (84). ಒನ್ದಾಗಮಮ್ ಆಗಿಯುಂ (293). ಆಗಿಯೂ. -ಊ 7. ಆ ಸು/?/ಗಳು ಬಹು ನುಣುಪಾಗಿಯೂ ಕೋಮಲವಾಗಿಯೂ ಒಪ್ಪುವವು (B. 2, 37). ಗೇಣ್ಡಾಮೃಗಗಳು ಸ್ಥೂಲವಾಗಿಯೂ ಅನ್ದಗೇಡಿಗಳಾಗಿಯೂ ಇರುತ್ತವೆ (5, 248). ಆಗಿ ಹೋಗು to be finished (C.). 2, to die (C.; B. 5, 199. 200. 212). ಆಗುತ್ತ ಬರು to be in the course of becoming, to be about to become (My.; B. 3, 101). ಆಗುತ್ತಲೆ when it comes or came to pass; when it arrives or arrived; afterwards (My.; B. 5, 294. 295). [ಆಗೆ having become. ನಿರ್ಮಳ ಮಣಿ ಭೂಷಣಂ ಫಣಿ ವಿಭೂಷಣಮಾಗೆ Pb. 1, 2]. ಆದಡೆ. ಆದ- ಅಡೆ 1. = ಆದೊಡೆ, ಆದರೆ (Bp. 18, 37; 21, 9). ಆದಡೆಯು.ಉ 9. = ಆದರು etc. (Rām. 6, 50, 14). ಆದರು. ಆದ- ಆರೆ 1 ಉ 9. = ಆದಡೆಯು, ಆದೊಡೆಯು, ಆದರೂ etc. see e. g. such forms as ಯಾವದಾದರೊನ್ದು (B. 3, 2. 3). ಆದರೂ. ಆದ-ಅರೆ 1 ಊ 7. = ಆದರು, ಆದೊಡಂ etc. (C.). e.g. Si. 74. 96. 122. 186. 250. 306. ಆದರೆ. ಆದ-ಅರೆ 1. = ಆದಡೆ etc. (C)., e. g. Si. 404. 473. ಆದರೆ ಒನ್ದು ಅಡಿಕೆ ಮರ, ಹೋದರೆ ಒನ್ದು ಗೋಟಡಿಕೆ. -ಆದರೆ ಹೋದರೆ ಹತ್ತಿ ಬೆಳದರೆ, ಅಜ್ಜೀ, ನಿನಗೊನ್ದು ಪಟ್ಟೀ ಸೀರೆ. -ಆದರೆ ಅಮಾವಾಸೆ, ಹೋದರೆ ಹುಣ್ಣಿಮೆ (Prvs.). ಆದೊಡಂ. ಆದ-ಒಡೆ4-ಅಂ5. = ಆದೊಡೆಯು, ಆದೊಡೆಯೂ, ಆದರು, ಆದರೂ though he, she, it, they be, etc. 2, soever, e. g. ಆರಾದೊಡಂ (ಯಾರಾದರೂ) whosoever, any one, somebody; ಎನ್ತಾದೊಡಂ (ಹ್ಯಾಗಾದರೂ) howsoever (Śmd. 164); ಎಲ್ಲಿಯಾದೊಡಂ anywhere, somewhere; ಏನಾದೊಡಂ, something, anything. 3, whether-or, either-or, e. g. ಹೆಣ್ಣಾದೊಡಂ ಗಣ್ಡಾದೊಡಂ (Śmd. 148); ಪೂರ್ವದೀರ್ಘಮ್ ಆದೊಡಮ್ ಅವ್ಯಯಮ್ ಆದೊಡಮ್ ಅನೇಕಾಕ್ಷರಮ್ ಆದೊಡಂ (84); see also 85. 87. 4, at least, at any rate, e. g. (ಔರಸಪುತ್ರನ್) ಇಲ್ಲದೊಡೆ ಮಿಕ್ಕ ಒಮ್ಬತ್ತು ಬಗೆಯೊಳಗೆ ಒನ್ದು ತೆ/?/ದ ಮಗನ್ ಆದೊಡಂ ಬೇಕು (J. 28, 57). 5, however, but (see No. 1). 6, even (see No. 1). ಅವಂಗೆ ಒಬ್ಬ ಮಗನಾದೊಡಮ್ ಇಲ್ಲ he has not even one son. ಆದೊಡೆ. ಆದ-ಒಡೆ 4. = ಆದಡೆ, ಆದರೆ if it becomes manifest, etc.; if it is possible [ಅವಗಗುಣಮಿನಿತಾದೊಡಮಾ ಕವಿತಾಬನ್ಧಮನಶೇಷಮ್ ದೂಷಿಸಿಗುಂ Kr. 1, 43; Pb. 1, 12]. (Bp. 42, 28). 2, if it is or be; if so (J. 2, 24; 12, 16. 19). 3, but (2, 21). 4, if concerned, as for. ಆನ್ (ನಾನು) ಆದೊಡೆ as for me. ಆದೊಡೆಯು. ಆದೊಡೆ-ಉ 9. = ಆದರು, ಆದರೂ, ಆದೊಡಂ etc. ಧನವನ್ ಇತ್ತು ಆದೊಡೆಯು ಸಹಭೋಜನವನ್ ಉಣ್ಡು ಆದೊಡೆಯುಮೇಣ್ ನಿಜತನುಜೆಯರನ್ ಇತ್ತು ಆದೊಡೆಯೂ ಬ/?/ ಸನ್ದು ಬೇಸ/?/ದೆ ತನುವ ಬೆರಸಿ ಇದ್ದು ಆದೊಡೆಯು ರಿಪು ಜನಪತಿಯ ವಶ ಮಾ/?/ದು ಉಚಿತಮ್ ಇದು (Bh. 1, 8, 45). ಆದೊಡೆಯೂ. ಆದೊಡೆ-ಊ 7. = ಆದೊಡೆಯು q. v., etc. remarks: a particularity is seen in the following instances: ಸನ್ದಿಸಿದರಾದಡೆ (Bp. 21, 9). ಅ/?/ದರಾದೊಡೆ (30, 9). ಅ/?/ದೆಯಾದೊಡೆ (49, 28). ತಪ್ಪಿಸಿದನಾದೊಡೆ (53, 34). ಬಿಡ್ಡಿಯಾದೊಡೆ (Bh. 1, 8, 20). ಬಿದ್ದರಾದೊಡೆ (1, 8, 21). ಧನವನಿತ್ತಾದೊಡೆಯು (1, 8, 45). ಒಡಬಡುವಿರಾದೊಡೆ (1, 8, 77). ಸಯ್ರಿಸಿದೆಯಾದೊಡೆ (J. 12, 41). 2, ಆಗು has been used to form a kind of passive (My.), e. g. ಪ್ರಯೋಗಿಸ ಪಡೆಗುಂ is explained by ಪ್ರಯೋಗಿಸುವುದು ಅಹುದು (Śmd. 135 Mḍb. MS.). ಕೆಟ್ಟ ಸ್ಥಲದಲ್ಲಿ ಮಾಡುವ ಒಳ್ಳೇ ಕೆಲಸಗಳು ಸಹ ಕೆಟ್ಟ ಕೆಲಸಗಳೇ ಎಣಿಸಲಾಗುವವು (B. 2, 14). ಒಂದು ತಾಸಿನೊಳಗೆ ನಾಲ್ಕು ಸಾವಿರ ತಾವು ಎರಡೂ ಮೆಯ್ ಮುದ್ರಿಸೋಣವಾಗುತ್ತದೆ (4, 103). ಅದು or ಅದನ್ನು ಹೇ/?/ಣವಾಯಿತು, ಅದು or ಅದನ್ನು ಕೊಡೋಣವಾಯಿದು (My.). for remark 1 cf. the use of ಅನ್ದರೆ No. 4.

  2. 2.
    2.

    becoming, coming to pass, etc. ಆಗು ಹೋಗು coming about or being accomplished and not coming about, etc., accomplishment and failure (My.; Bh. 8, 26, 3; 10, 4, 21). [ಆಗುಮಾಡು to accomplish, to get a work done (C.).].

  3. 3.

    = ಆಗುರ್ (Bp. 6, 9; Sk. ಆಗೂ). ಆಗುನುಡಿ an honorific appellation. ಆಗುನುಡಿ ಭಗವತ್ ಭಗವತ್ತು ಎನಿಕುಂ, ಪೆಸರ ಕಡೆಯ ಆಗುನುಡಿ ದೇವನ್ ಅಕ್ಕು (Mr. 90). ಆಗು ಮಾಡು to make an agreement, to agree to (Bp. 24, 25; Dp. 65, 4).

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    vi.

    (be) 1 to come into being or existence ű ಹತ್ತಿಯಿಂದ ಬಟ್ಟೆ ಆಗುತ್ತದೆ. The cloth is made out of cotton. 2 to take place, to come about or to pass, to happen (an accident, loss, etc.) ű ಸಾರಾಯಿ ಕುಡಿದು ವಾಹನ ಓಡಿಸಿದರೆ ಅಪಘಾತ ಆಗುತ್ತದೆ. If one drives a vehicle after drinking liquor accident will take place. 3 to become, to change into, to develop into ű ಮಜ್ಜಿಗೆ ಸ್ವಲ್ಪ ಸಮಯದ ನಂತರ ಹುಳಿಯಾಗುತ್ತೆ. Buttermilk becomes sour after some time. 4 to accrue to, to fall to the share of ű ಹೊಸ ವಿಮಾನನಿಲ್ದಾಣದ ನಿರ್ಮಾಣದಿಂದ ರಾಜಕಾರಣಿಗಳಿಗೆ ಲಾಭ ಆಗುತ್ತದೆ. Politicians will be benefited by the construction of the new airport. 5 to be (so and so) ű ಸುಂದರವಾದ ರೂಪ. beautiful appearance 6 to be effected or done, to be finished ű ಕೆಲಸ ಆಯಿತಾ ? Have (you) finished the work? 7 to elapse, to go (as the time) ű ಅವರು ಹೋಗಿ ಹತ್ತು ವರ್ಷ ಆಯಿತು. Ten years have passed after his death. 8 to be sufficient (for), to do ű ಒಂದೇ ಮುಂಬಾಗಿಲು ಎರಡು ಮನೆಗೂ ಆಗುತ್ತೆ. One front gate will do for both the houses. 9 to be comely, to be suitable or fit ű ಈ ಅಂಗಿ ನಿಮಗೆ ಆಗುತ್ತೆ. This shirt is suitable to you. 10 to be practicable, to be possible ű ಈ ಕೆಲಸ ಹತ್ತು ದಿವಸದಲ್ಲಿ ನನ್ನಿಂದ ಆಗೋದಿಲ್ಲ. I cannot do this work in ten days. 11 to be related ű ನಿಮಗೆ ಅವನು ಏನು ಆಗಬೇಕು. ? How is he related to you?

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0