ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಊಟ

ಉಚ್ಚಾರಣೆ: ūṭa
ಮೂಲ: Ka. ūḍu D600 + -ta

ಅಲರ್ ನಿಘಂಟು (ವಿ. ಕೃಷ್ಣ)

  1. 1.
    noun

    a taking of one's chief meal of the day.

  2. 2.
    noun

    the chief meal of the day.

  3. 3.
    noun

    ಊಟ ಉಡುಗೆ ūṭa uḍuge the essentials as food and clothes; ಊಟದ ಅಂಗಡಿ ūṭada aŋgaḍi a commercial establishment that provides food at a cost; a hotel; ಊಟದ ತಾಟು ūṭada tāṭu a metal dining plate; ಊಟ ಉಪಚಾರ ūṭa upcāra (often wrongly used as ಊಟೋಪಚಾರ) food served and hospitality extended (to one's guests); ಊಟಮಾಡು ūṭa māḍu to eat one's meal; ಊಟಕ್ಕಿಲ್ಲದ ಉಪ್ಪಿನಕಾಯಿ ಯಾತಕ್ಕೂ ಬೇಡ ūṭakkillada uppinakāyi yātakkū bēḍa (prov.) a thing not got when it is need, is useless; a book that is shut is but a block; ಅಗ್ರಸಾಲೆಯಲ್ಲಿ ಊಟ ಚಂದ್ರಸಾಲೆಯಲ್ಲಿ ನಿದ್ರೆ agrasāleyalli ūṭa candrasāleyalli nidre (prov.) lead a irresponsible life (caring not for even one's family); ಊಟ ಬಲ್ಲವನಿಗೆ ರೋಗವಿಲ್ಲ ūṭaballavanige rōgavilla (prov.) eat and drink measuredly and defy the medicine; ಊಟ ತನ್ನಿಚ್ಛೆ ನೋಟ ಪರರಿಚ್ಛೆ ūṭa tannicche, nōṭa pararicche (prov.) each one has his own taste of food, which cannot be generalised; ಊಟಕ್ಕಿಲ್ಲದವ ಕಾಟ ಕೊಡುತ್ತಾನೆ ūṭakkilladava kāṭa koḍuttāne (prov.) snatch a poor man's bread to turn him antisocial; ಮಾತಿಗೆ ಮೊದಲು ಗಾದೆ, ಊಟಕ್ಕೆ ಮೊದಲು ಉಪ್ಪಿನಕಾಯಿ mātige modalu gāde, ūṭakke modalu uppinakāyi (prov.) a proverb is as essential for a meaningful and effective communication, as the pickles are for a good meal; ಊಟ ಕೌರವರಲ್ಲಿ, ಪಕ್ಷ ಪಾಂಡವರಲ್ಲಿ ūṭa Kauravaralli, pakṣa Paṇḍavaralli (prov.) get the benefits from one, but support his rival.

ವ್ಯುತ್ಪತ್ತಿ ನಿಘಂಟು (Učida & Rajapurohit)

  1. 1.
    n.

    (food) 1 having a meal, meal 2 (mostly vegetarian) set meal (lunch or dinner) served on a metal plate or on a banana leaf, etc., in restaurants in South India

ಕಿಟ್ಟೆಲ್ ನಿಘಂಟು

  1. 1.

    a verbal noun of ಊಡು 1; taking a meal; a meal (C.; ವಲ್ಭನ, ಅಭ್ಯವಹಾರ, ಆಶನ, ಭಕ್ಷಣ, ಭೋಜನ etc. Hlā., Nr., Mr. 220, Si. 317; T., Tu.). ವರಸುತನುಮ್ ಇಲ್ಲದ ಮನೆಯೊಳ್ ಊಟಮ್ ಅದು ಆಗದು (Bp. 24, 31). ಕೇಲಿಗೆ ಊಟಕೆ ಮಾಡಿದವನೋ (40, 42). ತಿರದುಮ್ಬ ಊಟ (43, 58). ಊಟಕೆ ಬನ್ದೆ (61, 19). ಊಟಕ್ಕೆ ಬಾ (B. 2, 7). ಊಟದಲ್ಲಿ ಬಹಳ ಮಿತಿ ಇರಬೇಕು (4, 25). ನಾಲ್ಕು ಮನ್ದಿ ಆಪ್ತ ಇಷ್ಟರಿಗೆ ಊಟಕ್ಕೆ ಹೇ/?/ದ್ಧೇನೆ (4, 52). ಊಟಕ್ಕೆ ಕರೆಯುತ್ತೀರಿ (5, 152). ಊಟಕ್ಕೆ ಕೂತರೂ (5, 153). ಊ/?/ಗದವರ ಊಟವು ಒತ್ತಟ್ಟಿಗೆ ಆಗುತ್ತದೆ (5, 286). ಊಟ ಆದ ಮೇಲೆ (5, 294). ಮಾತಿಗೆ ಮೊದಲು ಗಾದೆ, ಊಟಕ್ಕೆ ಮೊದಲು ಉಪ್ಪಿನ ಕಾಯಿ. -ಊಟಕ್ಕಿಲ್ಲದ ಉಪ್ಪಿನಕಾಯಿ ಯಾತಕ್ಕೂ ಬೇಡ. -ಊಟಕ್ಕಿಲ್ಲದವನು ಕಾಟ ಮಾಡದೇ ಇರನು. -ಊಟಕ್ಕೆ ಕಿಚ್ಚು ಬಿತ್ತು (or ಬೀ/?/ಲಿ); ಗನ್ಧ ತೇದು, ಹೆಣ ಹೋಯ್ತು. -ಊಟಕ್ಕೆ ಮುಂಚು, ಮೀಣಕ್ಕೆ ಹಿಂಚು. -ಊಟಕ್ಕೆ ಮುಂಚು, ದಣ್ಡಿಗೆ ಹಿಂಚು. -ಊಟ ಚಲೋದಾಯಿತು, ಹೊಟ್ಟೆ ಮಾತ್ರ ತುಂಬಲಿಲ್ಲ. -ಊಟದಲ್ಲಿ ನೀಟಾಗಿರ ಬೇಕು. -ಊಟ ಪಠಿಸಿದ ಹಾಗೆ. -ನೋಟ ಪೆ/?/ರಿಚ್ಛೆ, ಊಟ ಮನದಿಚ್ಛೆ. -ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ. -ಊಟ ಬೇಡವೆನ್ದು, ನಾಟಲಿಕ್ಕೆ ಹೋದ. -ಊಟ ಅನ್ದರೆ ಹೂ, ಓಟ ಅನ್ದರೆ ಊಹೂ. -ಊಟ ಬೇ/?/, ಪಡಿ ಬೇ/?/. -ಊಟ ಹಾಗ, ಪಲಹಾರ ಮುಪ್ಪಾಗ (Prvs). ವಿಷಯಲಮ್ಮಟನಾಗಿ, ಸವಿಯ ಊಟಗಳನ್ ಉಣ್ಡು, ಬೆಮಿಸ ಬೇಡ (Dp. 4, 1). ಪುತ್ರ ಹುಟ್ಟಿದ ದಿವಸ, ಹಾಲುಊಟದ ಹಬ್ಬ (1, 4). ಸೌಖ್ಯವಿಲ್ಲದ ಊಟವದು ಕಾಲ ಕೂಟ (54, 3). see Prvs. s. ನೂಕು 1, ನೋಟ, ಪಕ್ಷ, ಪಶು, ಬಟ್ಟೆ 2, ಬಿಟ್ಟಿಯೂಟ J. 29, 25; 34, 10. ಊಟ ಗೀಟ reit. a meal and its appendage (C.). ಊಟ ಮಾಡಿಸು to give a meal (to another, C.). ಅವನನ್ನು or ಅವನಿಗೆ ಊಟ ಮಾಡಿಸು (C.). ಊಟ ಮಾಡು to take a meal (C). ಕೂಡೆ ಊಟ ಮಾಡುವಿಕೆ (ಸಹಭೋಜನ Si. 317). see Prv. s. ನೊಣ.

ಕನ್ನಡ ಸಾಹಿತ್ಯ ಪರಿಷತ್ತು ನಿಘಂಟು

  1. 1.

    1. ಆಹಾರವನ್ನು ತೆಗೆದು ಕೊಳ್ಳುವುದು.
    2. ಆಹಾರ.

ಅಲರ್ ನಿಘಂಟು ಮಾಹಿತಿ ಮೂಲ: V. Krishna, ODC-ODbL ಪರವಾನಗಿ

Kannada-English Etymological Dictionary — N. Uchida & B. B. Rajapurohit, ed. J. Takashima, ILCAA, Tokyo University of Foreign Studies (2018). CC BY-NC 4.0

ಕಿಟ್ಟೆಲ್ ನಿಘಂಟು ಮಾಹಿತಿ ಮೂಲ: Rev. F. Kittel (1894), indic-dict/stardict-kannada

ಸಂಕ್ಷಿಪ್ತ ಕನ್ನಡ ನಿಘಂಟು ಮಾಹಿತಿ ಮೂಲ: ಕನ್ನಡ ಸಾಹಿತ್ಯ ಪರಿಷತ್ತು, indic-dict/stardict-kannada