ಎಲ್ಲರಿಗೂ ಬರಹಗಾರರಾಗುವ ಅವಕಾಶ ಸುಲಭದಲ್ಲಿ ಸಿಗಬೇಕು — ಇದೇ ಆಶಯದಿಂದ ಸಂಪದ ಪ್ರಾರಂಭವಾಯಿತು. ಎಷ್ಟೋ ಜನ ಒಳ್ಳೆಯ ಬರಹಗಾರರು, ತಮ್ಮ ಬರಹಗಳನ್ನು ಪ್ರಕಟಿಸಲಾಗದೆ ಅಲ್ಲಿಗೇ ನಿಲ್ಲಿಸಿಬಿಡುತ್ತಾರೆ. ಸಣ್ಣ ಸಣ್ಣ ಊರುಗಳಲ್ಲಿ, ಚೆನ್ನಾಗಿ ಬರೆಯುವ, ಓದಿನ ಬಗ್ಗೆ ಹುಚ್ಚು ಇಟ್ಟುಕೊಂಡಿರುವ ಬಹಳಷ್ಟು ಜನ ಇದ್ದಾರೆ. ಇಂಥವರನ್ನು ಮನಸ್ಸಿನಲ್ಲಿ ಇಟ್ಟುಕೊಂಡೇ ಸಂಪದ ಪ್ರಾರಂಭವಾದದ್ದು.
ಸಂಪದ ಪ್ರಾರಂಭವಾಗಿ ೨೨ ವರ್ಷಗಳೇ ತುಂಬುತ್ತಿರುವ ಈ ಸಮಯದಲ್ಲಿ, ಉತ್ತಮ ಬರಹಗಾರರ ೫ ಪುಸ್ತಕಗಳನ್ನಾದರೂ ತರಬೇಕೆಂಬ ಬಯಕೆ ನಮ್ಮದು. ಆದರೆ ಬರಹಗಾರರನ್ನು ಆಯ್ಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿರುವಾಗ — ಸಂಪದದಲ್ಲಿಯೇ ಬರೆದು ಹಾಕಿದ ಹತ್ತಾದರೂ ಲೇಖನಗಳನ್ನು ನೋಡಿ ನಾವು ಲೇಖಕರನ್ನು ಆಯ್ದುಕೊಳ್ಳಬಹುದು ಎಂಬ ನಿರ್ಧಾರಕ್ಕೆ ಬಂದೆವು.
ನಿಮ್ಮ ಪುಸ್ತಕ, ಅಥವಾ ನಿಮ್ಮ ಕನಸಿನ ಪುಸ್ತಕದ, ಹತ್ತಾದರೂ ಪುಟಗಳನ್ನು ಸಂಪದದಲ್ಲಿ ಪ್ರಕಟಿಸಿ. ನಮ್ಮ ಸಮುದಾಯದ ಓದುಗರು ಓದಿದಾಗ ಬರುವ ಪ್ರತಿಕ್ರಿಯೆ ನಿಮಗೆ ಉಪಯುಕ್ತವಾಗುತ್ತದೆ. ನೀವು ಹಾಕಿದ ಹತ್ತು ಬರಹಗಳನ್ನು — ನಿಮ್ಮ ಶೈಲಿ, ನಿಮ್ಮ ಭಾಷೆಯ ಹಿಡಿತ ಮುಂತಾದವುಗಳ ಆಧಾರದ ಮೇಲೆ — ಮೌಲ್ಯ ನಿರ್ಧಾರಕ್ಕೆ ಒಳಪಡಿಸಲಾಗುತ್ತದೆ.
ಕೊನೆಯದಾಗಿ, ಯಾವ ಬರಹಗಾರರನ್ನು ಆ ೫ ಪುಸ್ತಕಗಳಿಗಾಗಿ ಆಯ್ಕೆ ಮಾಡಬೇಕು ಎಂಬುದನ್ನು ಕನ್ನಡದ ಹಿರಿಯ ಸಾಹಿತಿಗಳು ನಿರ್ಧರಿಸುತ್ತಾರೆ. ಇದಕ್ಕಾಗಿ ಒಂದು ಸಮಿತಿಯ ರಚನೆ ಕೂಡ ಆಗುವುದು. ಬರುವ ದಿನಗಳಲ್ಲಿ ಆ ಸಮಿತಿಯ ಕುರಿತು ಹೆಚ್ಚಿನ ಮಾಹಿತಿಯನ್ನೂ ಇಲ್ಲಿಯೇ ಪ್ರಕಟಿಸಲಾಗುವುದು.
ಮತ್ತೇನು, ಸಮಯ ಹಾಳು ಮಾಡದೆ ಬರೆಯಲು ಪ್ರಾರಂಭಿಸಿ.
ಪ್ರಕಟಿತ ಲೇಖಕರಾಗಲು
ನಾಲ್ಕು ಹೆಜ್ಜೆ
-
೧
ಬರೆಯಿರಿ
ಸಂಪದದಲ್ಲಿ ನಿಮ್ಮ ಮೊದಲ ಬರಹ ಪ್ರಕಟಿಸಿ. ನಿಮ್ಮ ಪ್ರೊಫೈಲ್ ಪೂರ್ಣಗೊಳಿಸಿ.
-
೨
ನಿಮ್ಮ ಕನಸಿನ ಪುಸ್ತಕದ ಹತ್ತು ಬರಹಗಳನ್ನು ಪ್ರಕಟಿಸಿ
ದಿನಕ್ಕೆ ಒಂದರಂತೆ ನಿಮ್ಮ ಕನಸಿನ ಪುಸ್ತಕದ ಹತ್ತು ಬರಹಗಳನ್ನು ಸಂಪದದ ಓದುಗರೊಂದಿಗೆ ಹಂಚಿಕೊಳ್ಳಿ.
-
೩
ಮೌಲ್ಯಮಾಪನ
ಕನ್ನಡದ ಹಿರಿಯ ಸಾಹಿತಿಗಳಿಂದ ಕೂಡಿದ ಸಮಿತಿಯಿಂದ ಪರಿಶೀಲನೆ ಮತ್ತು ಓದುಗರ ಪ್ರತಿಕ್ರಿಯೆ.
-
೪
ಪ್ರಕಟಣೆ
ಆಯ್ಕೆಯಾದ ಐದು ಲೇಖಕರ ಪುಸ್ತಕಗಳು ೨೦೨೬ರಲ್ಲಿ ಬಿಡುಗಡೆ.
ಸಂಪದದಲ್ಲಿ ನಿಮ್ಮ ಪದಗಳು ಬರಲಿ. ಅವು ನಿಮ್ಮ ಸಂಪತ್ತು ಕೂಡ ಆಗಲಿ.
ಕನ್ನಡದ ಸಂಪತ್ತು ಹೊಸ ಬರಹಗಾರರಿಂದ ಹೊಳೆಯಲಿ.
ಸಂಪದ ಸೇರಿ · ಬರೆಯಲು ಪ್ರಾರಂಭಿಸಿ