ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಕುವೆಂಪು

ಕುವೆಂಪು

೧೯೦೪ – ೧೯೯೪

ಇತರ ಹೆಸರುಗಳು: ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ, Kuvempu

೧ ೮೨೦
ಆಧುನಿಕ ಕನ್ನಡ ಸಾಹಿತ್ಯದ ಜಗತ್ತಿನಲ್ಲಿ "ಯುಗದ ಕವಿ, ಜಗದ ಕವಿ" ಎಂದೇ ಖ್ಯಾತರಾದ, 'ವಿಶ್ವಮಾನವ' ಸಂದೇಶ ಸಾರಿದ ಮಹಾನ್ ಯುಗಪುರುಷ ರಾಷ್ಟ್ರಕವಿ ಕುವೆಂಪು (ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ) ಜಾತಿ, ಮತ, ದೇಶಗಳ ಗಡಿಗಳನ್ನು ಮೀರಿ ಪ್ರತಿಯೊಬ್ಬ ಮನುಷ್ಯನೂ "ವಿಶ್ವಮಾನವ"ನಾಗಬೇಕು ಎಂಬ ಸಾರ್ವಕಾಲಿಕ ಚಿಂತನೆಯನ್ನು ಕನ್ನಡ ಸಾಹಿತ್ಯಕ್ಕೆ ನೀಡಿದ ಕೀರ್ತಿ ಕುವೆಂಪು ಅವರಿಗೆ ಸಲ್ಲುತ್ತದೆ

ಜೀವನ ಪರಿಚಯ

ಕುಪ್ಪಳಿ ವೆಂಕಟಪ್ಪ ಪುಟ್ಟಪ್ಪ (ಕಾವ್ಯನಾಮ: ಕುವೆಂಪು). ಕುವೆಂಪು ಅವರ ಜನನ ಡಿಸೆಂಬರ್ ೨೯, ೧೯೦೪ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹಿರೇಕೊಡಿಗೆಯಲ್ಲಿ ಜನನ, ಬಾಲ್ಯ ಬೆಳೆದದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿಯಲ್ಲಿ ಆಯಿತು. ಇವರ ತಂದೆ ವೆಂಕಟಪ್ಪ ಗೌಡ ಮತ್ತು ತಾರಿ ಸೀತಮ್ಮ. ಕುವೆಂಪು ಅವರ ಪತ್ನಿ ಹೇಮಾವತಿ . ಮಕ್ಕಳು ಖ್ಯಾತ ಸಾಹಿತಿ ಪೂರ್ಣಚಂದ್ರ ತೇಜಸ್ವಿ, ಕೋಕಿಲೋದಯ ಚೈತ್ರ (ಪುತ್ರರು) ಹಾಗೂ ಇಂದುಕಲಾ, ತಾರಿಣಿ (ಪುತ್ರಿಯರು). ಇವರು ತೀರ್ಥಹಳ್ಳಿಯಲ್ಲಿ ತಮ್ಮ ಆರಂಭಿಕ ಶಿಕ್ಷಣ, ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಹಾಗೂ ಎಂ.ಎ. ಪದವಿ ಮುಗಿಸಿ, ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇರಿ, ನಂತರ ಮೈಸೂರು ವಿಶ್ವವಿದ್ಯಾನಿಲಯದ ಮೊದಲ ಕನ್ನಡಿಗ ಉಪಕುಲಪತಿ (Vice-Chancellor)ಯಾಗಿ ಸೇವೆ ಸಲ್ಲಿಸಿ ೧೯೬೦ ರಲ್ಲಿ ನಿವೃತ್ತರಾದರು. ಕನ್ನಡವನ್ನು ಬೋಧನಾ ಮಾಧ್ಯಮವನ್ನಾಗಿ ಜಾರಿಗೆ ತರಲು ಹಾಗೂ ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಅಧ್ಯಯನ ಸಂಸ್ಥೆ ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದರು. ಕರ್ನಾಟಕದ ರಾಜ್ಯಗೀತೆಯಾದ "ಜಯ ಭಾರತ ಜನನಿಯ ತನುಜಾತೆ" ಗೀತೆಯ ರಚನೆಕಾರರು. ನವೆಂಬರ್ ೧೧, ೧೯೯೪ ಮೈಸೂರಿನಲ್ಲಿ ನಿಧನ ಹೊಂದಿದರು.

ಸಾಹಿತ್ಯ ಕೃತಿಗಳು

ಕುವೆಂಪು ಅವರು ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲೂ ತಮ್ಮ ವಿಶಿಷ್ಟ ಮುದ್ರೆಯನ್ನು ಒತ್ತಿದ್ದಾರೆ. ಮಹಾಕಾವ್ಯ ಶ್ರೀ ರಾಮಾಯಣ ದರ್ಶನಂ (ಜ್ಞಾನಪೀಠ ಪ್ರಶಸ್ತಿ ವಿಜೇತ ಬೃಹತ್ ಮಹಾಕಾವ್ಯ) ಚಿತ್ರಾಂಗದಾ ಕಾದಂಬರಿಗಳು ಕಾನೂರು ಹೆಗ್ಗಡಿತಿ (೧೯೩೬) ಮಲೆಗಳಲ್ಲಿ ಮದುಮಗಳು (೧೯೬೭) ಪ್ರಸಿದ್ಧ ನಾಟಕಗಳು ಶೂದ್ರ ತಪಸ್ವಿ ಬೆರಳ್‌ಗೆ ಕೊರಳ್ ಸ್ಮಶಾನ ಕುರುಕ್ಷೇತ್ರಂ ರಕ್ತಾಕ್ಷಿ ಬಿರುಗಾಳಿ ಜಲಗಾರ ಯಮನ ಸೋಲು ಮಹಾರಾತ್ರಿ ಕವನ ಸಂಕಲನಗಳು: ಕೊಳಲು, ಪಾಂಚಜನ್ಯ, ನವಿಲು, ಕಲಾ ಸುಂದರಿ, ಪಕ್ಷಿಕಾಶಿ, ಇಕ್ಷುಗಂಗೋತ್ರಿ, ಅನಿಕೇತನ, ಪ್ರೇಮ ಕಾಶ್ಮೀರ, ಕಿನಿಕಿಣಿ, ಮಂತ್ರಾಕ್ಷತೆ ಮುಂತಾದವು. ಆತ್ಮಕಥೆ: ನೆನಪಿನ ದೋಣಿಯಲ್ಲಿ ಮಕ್ಕಳ ಸಾಹಿತ್ಯ/ನಾಟಕ: ಬೊಮ್ಮನಹಳ್ಳಿಯ ಕಿಂದರಿಜೋಗಿ, ನನ್ನ ಗೋಪಾಲ, ಮೋಡಣ್ಣನ ತಮ್ಮ, ಹಾಳೂರು.

ಪ್ರಶಸ್ತಿ ಮತ್ತು ಗೌರವಗಳು

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪದ್ಮಭೂಷಣ ರಾಷ್ಟ್ರಕವಿ ಪುರಸ್ಕಾರ ಜ್ಞಾನಪೀಠ ಪ್ರಶಸ್ತಿ ಪಂಪ ಪ್ರಶಸ್ತಿ ಪದ್ಮವಿಭೂಷಣ ಕರ್ನಾಟಕ ರತ್ನ

ಇವರ ಪುಸ್ತಕಗಳು

Birugali

Kuvempu

ಉದಯರವಿ ಪ್ರಕಾಶನ

೨೦೬

Vibhuti Pooje

Kuvempu

ಉದಯರವಿ ಪ್ರಕಾಶನ

೧೯೬

Nenapina Doniyalli

Kuvempu

ಉದಯರವಿ ಪ್ರಕಾಶನ

೧೭೮

Guruvinodane Devaradige - 402

Kuvempu

ಶ್ರೀ ರಾಮಕೃಷ್ಣ ಆಶ್ರಮ

೧೭೨

Rakthakshi

Kuvempu

ಉದಯರವಿ ಪ್ರಕಾಶನ

೧೬೮

Honna Hottare

Kuvempu

ಉದಯರವಿ ಪ್ರಕಾಶನ

೧೬೫

Manujamatha Viswapatha

Kuvempu

ಉದಯರವಿ ಪ್ರಕಾಶನ

೧೬೧

Kogile Mattu Soviet Rushya

Kuvempu

ಉದಯರವಿ ಪ್ರಕಾಶನ

೧೫೮

Manthrakshathe

Kuvempu

ಉದಯರವಿ ಪ್ರಕಾಶನ

೧೫೫

Kadaradake

Kuvempu

ಉದಯರವಿ ಪ್ರಕಾಶನ

೧೫೩

Aniketana

Kuvempu

ಉದಯರವಿ ಪ್ರಕಾಶನ

೧೪೯

Raso Why Saha

Kuvempu

ಉದಯರವಿ ಪ್ರಕಾಶನ

೧೪೯

Sahitya Prachara

Kuvempu

ಉದಯರವಿ ಪ್ರಕಾಶನ

೧೪೭

Preta Que

Kuvempu

ಉದಯರವಿ ಪ್ರಕಾಶನ

೧೪೫

Agnihamsa

Kuvempu

ಉದಯರವಿ ಪ್ರಕಾಶನ

೧೩೮

Shudra Tapasvi

Kuvempu

ಉದಯರವಿ ಪ್ರಕಾಶನ

೧೩೩

Jenaaguva

Kuvempu

ಉದಯರವಿ ಪ್ರಕಾಶನ

೧೩೦

Halluru

Kuvempu

Kannada Vishwavidhyalaya Hampi

೧೨೩

Taponandana

Kuvempu

ಉದಯರವಿ ಪ್ರಕಾಶನ

೧೨೨

Chandramanchake Baa Chakori

Kuvempu

ಉದಯರವಿ ಪ್ರಕಾಶನ

೧೧೮

ಸಂಪಾದನೆ ಸೂಚಿಸಲು ಅಥವಾ ಈ ಪುಟವನ್ನು ವರದಿ ಮಾಡಲು ಲಾಗಿನ್ ಆಗಿ.