ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರವಿರಾಜ ಬೈಕಂಪಾಡಿ

ರವಿರಾಜ ಬೈಕಂಪಾಡಿ

೦ ೪
ಮಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿ ವೃತ್ತಿ ನಿರ್ವಹಿಸುತ್ತಿರುವ ರವಿರಾಜ ಬೈಕಂಪಾಡಿಯವರ ಮೊದಲ ಪತ್ತೇದಾರಿ ಕತೆ 'ಭವಿಷ್ಯ' ಪ್ರಕಟವಾಗಿದ್ದು ಸುಧಾ ವಾರಪತ್ರಿಕೆಯಲ್ಲಿ. ಸುಧಾ, ತರಂಗ, ಮಯೂರ, ತುಷಾರ, ಕರ್ಮವೀರ, ಉತ್ಥಾನ, ಉದಯವಾಣಿಯಲ್ಲಿ ಅನೇಕ ಕತೆ-ನೀಳತೆಗಳು ಪ್ರಕಟಗೊಂಡಿವೆ. 2017ರಲ್ಲಿ 'ಕನ್ನಡಪ್ರಭ' ವಾರಪತ್ರಿಕೆ ನಡೆಸಿದ ರಾಜ್ಯಮಟ್ಟದ ಪತ್ತೆದಾರಿ ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಗಳಿಸಿದ್ದಾರೆ. ಎರಡು ಪತ್ತೇದಾರಿ ಕಿರು ಕಾದಂಬರಿಗಳು 'ತರಂಗ' ವಾರಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಕಟವಾಗಿವೆ. 'ಅನಾಮಧೇಯ ಕರೆ' ಅಂಕಿತ ಪುಸ್ತಕದಿಂದ ಪ್ರಕಟವಾದ ಇವರ ಮೊದಲ ಕಾದಂಬರಿ. ಡಾ. ಅಜಿತ್ ಹರೀಶಿ ಹಾಗೂ ವಿಠಲ್ ಶೆಣೈ ಸಂಪಾದಿಸಿದ ಇಪ್ಪತ್ತೆಂಟು ಲೇಖಕರ ಕಥಾಗುಚ್ಛ 'ಕಥಾಭರಣ'ದಲ್ಲಿ ಇವರ ಕತೆಯು ಸೇರಿದೆ. 'ವಿಜಯ ಕರ್ನಾಟಕ' ಪತ್ರಿಕೆಯು 2025ರಲ್ಲಿ ಯೋಜಿಸಿದ ರೋಚಕ ಕಥಾ ಸ್ಪರ್ಧೆಯಲ್ಲಿ ಇವರ ಕಥೆ ಮೆಚ್ಚುಗೆ ಗಳಿಸಿ, ಆ ಸಂಬಂಧ ಪ್ರಕಟವಾದ 'ಚೆಕ್ ಮೇಟ್' ಕಥಾಸಂಕಲನದಲ್ಲಿ ಇವರ ಕತೆ ಸೇರಿದೆ. ಚುಟುಕು ರಚನೆ ಇವರ ಇನ್ನೊಂದು ಹವ್ಯಾಸ. ಪ್ರಸ್ತುತ ದಕ್ಷಿಣ ಕನ್ನಡದ ಸುರತ್ಕಲ್ಲಿನಲ್ಲಿ ವಾಸವಾಗಿದ್ದಾರೆ.

ಇವರ ಪುಸ್ತಕಗಳು

ಸಂಪಾದನೆ ಸೂಚಿಸಲು ಅಥವಾ ಈ ಪುಟವನ್ನು ವರದಿ ಮಾಡಲು ಲಾಗಿನ್ ಆಗಿ.