ಮೂಢ ಉವಾಚ - 12 

ಇರುವುದು ನಿನದಲ್ಲ ಬರುವುದು ನಿನಗಲ್ಲ|

ತರಲಾರದ ನೀನು ಹೊರುವೆಯೇನನ್ನು?||

ಇದ್ದುದಕೆ ತಲೆಬಾಗಿ ಬಂದುದಕೆ ಋಣಿಯಾಗಿ|

ಫಲಧಾರೆ ಹರಿಯಗೊಡು ಮರುಳು ಮೂಢ||

 

ಸಂಬಂಧ ಬೇಕೆಂಬರಿಹರು ಯಾಕೆಂಬರಿಹರು|

ಬೆಸೆಯುವರಿಹರು ಬೆಸೆದುಕೊಂಬವರಿಹರು||

ಮುರಿಯುವವರಿಹರು ಮುರಿದುಕೊಂಬವರಿಹರು|

ಇವರೊಳು ನೀಯಾರು ನಾಯಾರು ಹೇಳು ಮೂಢ||

*****************************

-ಕವಿನಾಗರಾಜ್.