ಮುಖಪುಟ / ಪುಸ್ತಕ ಸಂಪದ / ಮಾಗಧ
ಮಾಗಧ

ಮಾಗಧ

ಲೇಖಕರು: ಸಹನಾ ವಿಜಯಕುಮಾರ್

ಪ್ರಕಾಶಕರು: ಸಾಹಿತ್ಯ ಭಂಡಾರ

5 (೧)
₹824.00 ₹915.00 10% ರಿಯಾಯಿತಿ ಲಭ್ಯವಿದೆ
₹೯೧ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸಹನಾ ವಿಜಯಕುಮಾರ್ ಇವರು ಮೂಲತಃ ಮೈಸೂರಿನವರು. ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷ ದುಡಿದ ಅನುಭವ. ೨೦೧೪ರಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದರು. ಸಹನಾ ವಿಜಯಕುಮಾರ್ ಇವರು ‘ಕನ್ನಡ ಪ್ರಭ’ ಪತ್ರಿಕೆಗೆ ಪ್ರತೀ ಮಂಗಳವಾರ ‘ಕನ್ನಡಿ’ ಎನ್ನುವ ಅಂಕಣ ಬರೆಯುತ್ತಿದ್ದರು. ಬಹಳಷ್ಟು ಮೆಚ್ಚುಗೆ ಪಡೆದ ಈ ಅಂಕಣವು ಪುಸ್ತಕ ರೂಪದಲ್ಲೂ ಲಭ್ಯವಿದೆ. '೨೦೧೬ರಲ್ಲಿ ‘ಕ್ಷಮೆ’ ಎನ್ನುವ ಕಾದಂಬರಿಯನ್ನು ಬರೆದರು. ಇದು ಇವರ ಚೊಚ್ಚಲ ಕಾದಂಬರಿ. ೨೦೨೫ರ ನವೆಂಬರ್ ತಿಂಗಳಲ್ಲಿ ಬಿಡುಗಡೆಯಾದ ಐತಿಹಾಸಿಕ ಕಾದಂಬರಿ ‘ಮಾಗಧ’. ಇದು ಪ್ರಚಲಿತವಿರುವ ಬೌದ್ಧ ಗ್ರಂಥಗಳ ಕಥೆಗಳನ್ನಲ್ಲದೆ, ಅಶೋಕನೇ ಸ್ವತಃ ಬರೆಸಿದ ಧರ್ಮಶಾಸನಗಳು ಮತ್ತು ಕೌಟಿಲ್ಯನ ಅರ್ಥಶಾಸ್ತ್ರವನ್ನು ಆಧರಿಸಿ ರೂಪಿತವಾಗಿದೆ. ಸಾಮ್ರಾಟ್ ಅಶೋಕನ ಜೀವನವನ್ನೇ ಬದಲಾಯಿಸಿದ ಕಳಿಂಗ ಯುದ್ಧ ಹಾಗೂ ಆತನ ಜೀವನದ ಹಲವಾರು ನಿರ್ಣಾಯಕ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತದೆ. ಅಶೋಕನ ಶಾಸನಗಳಲ್ಲಿ ಉಲ್ಲೇಖಿತವಾಗಿರುವ ಬ್ರಾಹ್ಮಣ, ಶ್ರಮಣ, ಆಜೀವಕ ಮತ್ತು ನಿರ್ಗ್ರಂಥ ಎಂಬ ನಾಲ್ಕು ನೆಲೆಗಳಲ್ಲಿ ಕಥಾನಕ ರೂಪಿತವಾಗಿದೆ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹824.00

ವಿಮರ್ಶೆಗಳು

5 · ೧ ವಿಮರ್ಶೆಯ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?