ಮುಖಪುಟ / ಪುಸ್ತಕ ಸಂಪದ / ಕಶೀರ
ಕಶೀರ

ಕಶೀರ

ಲೇಖಕರು: ಸಹನಾ ವಿಜಯಕುಮಾರ್

ಪ್ರಕಾಶಕರು: ಸಾಹಿತ್ಯ ಭಂಡಾರ

5 (೨)
₹405.00 ₹450.00 10% ರಿಯಾಯಿತಿ ಲಭ್ಯವಿದೆ
₹೪೫ ಉಳಿತಾಯ (10% ರಿಯಾಯಿತಿ)

ಪುಸ್ತಕದ ಬಗ್ಗೆ

ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌ ಆಗಿರುವ ಸಹನಾ ವಿಜಯಕುಮಾರ್ ಇವರು ಮೂಲತಃ ಮೈಸೂರಿನವರು. ಐಟಿ ಕ್ಷೇತ್ರದ ವಿವಿಧ ಹುದ್ದೆಗಳಲ್ಲಿ ಸುಮಾರು ಹದಿನೆಂಟು ವರ್ಷ ದುಡಿದ ಅನುಭವ. ೨೦೧೪ರಲ್ಲಿ ಅಂಕಣ ಬರಹಗಳ ಮೂಲಕ ಸಾಹಿತ್ಯ ಲೋಕಕ್ಕೆ ಪ್ರವೇಶ ಮಾಡಿದರು. ಸಹನಾ ವಿಜಯಕುಮಾರ್ ಇವರು ‘ಕನ್ನಡ ಪ್ರಭ’ ಪತ್ರಿಕೆಗೆ ಪ್ರತೀ ಮಂಗಳವಾರ ‘ಕನ್ನಡಿ’ ಎನ್ನುವ ಅಂಕಣ ಬರೆಯುತ್ತಿದ್ದರು. ಬಹಳಷ್ಟು ಮೆಚ್ಚುಗೆ ಪಡೆದ ಈ ಅಂಕಣವು ಪುಸ್ತಕ ರೂಪದಲ್ಲೂ ಲಭ್ಯವಿದೆ. '೨೦೧೬ರಲ್ಲಿ ‘ಕ್ಷಮೆ’ ಎನ್ನುವ ಕಾದಂಬರಿಯನ್ನು ಬರೆದರು. ಇದು ಇವರ ಚೊಚ್ಚಲ ಕಾದಂಬರಿ. ೨೦೧೮ರಲ್ಲಿ ಇವರು ಬರೆದ ‘ಕಶೀರ’ ಕಾದಂಬರಿಯು ಕಶ್ಮೀರದ ಕಥಾವಸ್ತುವನ್ನು ಹೊಂದಿದೆ. ಕಶೀರ ಕಾದಂಬರಿಗೆ ಖ್ಯಾತ ಕಾದಂಬರಿಕಾರರಾದ ಎಸ್ ಎಲ್ ಭೈರಪ್ಪ ಮುನ್ನುಡಿ ಬರೆದಿದ್ದಾರೆ. ಇದು ಈಗಾಗಲೇ ಹಿಂದಿ, ಮರಾಠಿ ಹಾಗೂ ಆಂಗ್ಲ ಭಾಷೆಗೆ ಅನುವಾದಗೊಂಡಿದೆ. ಈ ಕೃತಿಯಲ್ಲಿ ಕಶ್ಮೀರದ ಜ್ವಲಂತ ಸಮಸ್ಯ್ರೆಗಳ ಬಗ್ಗೆ ಮನಮುಟ್ಟುವಂತೆ ಲೇಖಕಿ ಬರೆದಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಕಶ್ಮೀರದ ಜನತೆ ಅನುಭವಿಸುತ್ತಿರುವ ತೊಂದರೆಗಳು, ಕಶ್ಮೀರದ ಇತಿಹಾಸ , ಜನರ ನೈಜ ಪರಿಸ್ಥಿತಿಗಳ ಬಗ್ಗೆ ಮಾಹಿತಿ ನೀಡುವ ಕೃತಿ.
ಸಂಖ್ಯೆ
ಇಡೀ ಭಾರತದಲ್ಲಿ ₹50 ಶಿಪ್ಪಿಂಗ್ · ಕರ್ನಾಟಕದಲ್ಲಿ ₹500 ಮೇಲೆ ಉಚಿತ · ಭಾರತದಲ್ಲಿ ₹500 ಮೇಲೆ ಉಚಿತ ವಿವರ ↗
ಸುರಕ್ಷಿತ ಪಾವತಿ ಇಡೀ ಭಾರತಕ್ಕೆ ರವಾನೆ ಚೆಕ್‌ಔಟ್‌ನಲ್ಲಿ ಉಡುಗೊರೆ ಆಯ್ಕೆ
₹405.00

ವಿಮರ್ಶೆಗಳು

5 · ೨ ವಿಮರ್ಶೆಗಳ ಆಧಾರದಲ್ಲಿ

ವಿಮರ್ಶೆ ಬರೆಯಲು ಲಾಗಿನ್ ಆಗಿ.

ಇನ್ನೂ ವಿಮರ್ಶೆಗಳಿಲ್ಲ — ಮೊದಲ ವಿಮರ್ಶೆ ನಿಮ್ಮದಾಗಲಿ.

ನಿಮಗೆ ಇಷ್ಟವಾಗಬಹುದು

ಸಹಾಯ ಬೇಕೇ?