ಮೂಢ ಉವಾಚ - 2

ಗುಣವಿರದ ಹಣವಂತ ಹಣವಿರದ ಗುಣವಂತ|

ಗುರುವಿರದ ಗುರುಕುಲ ಒಡೆಯನಿಲ್ಲದ ಮನೆಯು||

ಇದ್ದರೇನು ಇಲ್ಲದಿರೇನು ತಳವಿರದ ಮಡಕೆಯು|

ಲೋಕ ಕೊರತೆಯ ಸಂತೆ ಚಿಂತೆಯಾ ಕಂತೆ ಮೂಢ||

 

ಅತಿವಿನಯ ತೋರುವರು ಸುಮ್ಮನೆ ಹೊಗಳುವರು|

ಸೇವೆಯನು ಗೈಯುವರು ನಂಬಿಕೆಯ ನಟಿಸುವರು||

ನೀನೆ ಗತಿ ನೀನೆ ಮತಿ ಪರದೈವವೆನ್ನುವರು|

ಕುರ್ಚಿಯಾ ಮಹಿಮೆಯದು ಉಬ್ಬದಿರು ಮೂಢ||

***************

ಕವಿನಾಗರಾಜ್.