ಮೂಢ ಉವಾಚ - 4 

ಬಯಕೆಗೆ ಕೊನೆಯಿಲ್ಲ ಬಯಕೆಗೆ ಮಿತಿಯಿಲ್ಲ|

ಬಯಕೆ ಬೀಜಾಸುರನ ಸಂತತಿಗೆ ಸಾವಿಲ್ಲ||

ಬಯಕೆ ಜೀವನವು ಬಯಸುವುದು ತಪ್ಪಲ್ಲ|

ಸ್ವಬಲವೇ ಹಂಬಲಕೆ ಬೆಂಬಲವು ಮೂಢ||

 

ತಾವೇ ಮೇಲೆಂಬರು ಇತರರನು ಹಳಿಯುವರು|

ಪರರೇಳಿಗೆಯ ಸಹಿಸರು ಕಟುಕಿ ಮಾತಾಡುವರು||

ಅರಿಯರವರು ಇತರರಿಗೆ ಬಯಸುವ ಕೇಡದು|

ಎರಡಾಗಿ ಬಂದೆರಗುವುದೆಂಬುದನು ಎಲೆ ಮೂಢ||

*************

-ಕವಿನಾಗರಾಜ್.