ಈ ಜೋಕುಗಳ ಮೂಲ ಇರುವುದು ನನ್ನ ಬ್ಲಾಗ್ http://shivagadag.blogspot.com ನಲ್ಲಿ
ಸಂಪದ ಓದುಗರಿಗಾಗಿ ಇಲ್ಲಿ ಪ್ರಸ್ತುತಪಡಿಸುತ್ತಿದ್ದೇನೆ..
೧) ಇದನ್ನು ಕಳಿಸಿದವರು:- --- ಮಂಜ (ಚಿಕ್ಕನಾಯಕನಹಳ್ಳಿ/ಬೆಂಗಳೂರು)
ಒಂದು ಸುಂದರವಾದ ಹುಡುಗಿ ಭಾರತಕ್ಕೆ ಬಂದಳು...
.....
.............
................
....................
...........................
......................................
..........................................................
...........................................................................................
ಒಂದು ಹುಡುಗಿ ಬರೋದೆ ತಡ.. ನಮ್ ಜನ ಹುಡುಕೋಕೆ ಶುರು...
2) ಇದನ್ನು ಕಳಿಸಿದವರು:- ----ಸುಗುಣಸಾಗರ (ಚನ್ನೈ/ ಚಿಕ್ಕನಾಯಕನಹಳ್ಳಿ)
ಹೆಂಡತಿ:- ರೀ ನಮ್ ಮದುವೆ ಮಾಡಿಸಿದ ಪುರೋಹಿತ ಸತ್ತು ಹೋದ್ನಂತೆ ಕಣ್ರಿ..
ಗಂಡ:- ಮಾಡಿದ ಪಾಪ ಸುಮ್ನೆ ಬಿಡುತ್ತಾ??
3) ಇದನ್ನು ಕಳಿಸಿದವರು:- ----ರಘು (ಶಿರಾ)
ಲೋ
ಬಿಡ್ಡಾ..
ನಾಗ..
ಸೋಮ...
ಮಂಜ....
ಸೀನ..
ಎಲ್ಲರೂ ಮಚ್ಚು ತಗಂಡು ಬರ್ರಲೇ..
ನಮ್ ಸಿಸ್ಯ ಯಾಕೋ ಮೆಸೇಜೇ ಕಳುಸ್ತಿಲ್ಲಾ;......
4) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ಹಿತವಚನ:- ನೀವು ಬಸ್ಸಲ್ಲಿ ಹತ್ತಿದ್ರೂ,
ನಿಮ್ ಮೇಲೆ ಬಸ್ ಹತ್ತಿದ್ರೂ,
ಟಿಕೇಟ್ ತೊಗೊಳೋದು ನೀವೇ.............
5) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ಉಗ್ರಗಾಮಿ:- ಯಾರು ನೀನು??
ವಿಷ್ಣುವರ್ಧನ್:- ಸಿಂಹ, ಸಾಹಸ ಸಿಂಹ...
ಉಗ್ರಗಾಮಿ:- ಪ್ರಿಪೇಯ್ಡ್ ಸಿಮ್ಮಾ..?? ಇಲ್ಲಾ ಪೋಸ್ಟ್ ಪೇಯ್ಡ್ ಸಿಮ್ಮಾ..????
6) ಇದನ್ನು ಕಳಿಸಿದವರು:- ----ಯದು ದಾಭಾ (ಚಿಕ್ಕನಾಯಕನಹಳ್ಳಿ)
ಅವತ್ತು ಆ ಡೆಡ್ ಬಾಡೀನ ತಂದು ಹಾಕ್ದೋರು ಯಾರು?>>
.
.
..
....
.......
.............
ನೋಡಿರಿ ನಿಮ್ಮ ನೆಚ್ಚಿನ ಕ್ರೈಮ್ ಡೈರಿಯಲ್ಲಿ ಮಾತ್ರ,.
7) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)
ಹಿಂದಿನ ಮಾತು:-
'ಅಕ್ಷರ ಕಲಿತ ನಾರಿ, ಪ್ರಗತಿಗೆ ದಾರಿ'
ಇಂದಿನ ಮಾತು:-
'ಅಕ್ಷರ ಕಲಿತ ನಾರಿ, ಲವ್ ಮಾಡಿ ಪರಾರಿ'
8) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)
ಹೊಸ ಇಂಜಿನೀಯರಿಂಗ್ ಗಾದೆಗಳು
ಅ) ಬಿ.ಇ. ಮಾಡೋದಕ್ಕಿಂತ ಬೀದಿ ಸುತ್ತೋದೇ ಲೇಸು
ಆ) ವಿದ್ಯಾರ್ಥಿ ದುಡ್ಡು, ವಿ.ಟಿ.ಯು. ಜಾತ್ರೆ
ಇ) ಪೇಪರ್ ಚಿಕ್ಕದಾದ್ರೂ, ಉತ್ತರ ದೊಡ್ಡದು
ಈ) ಬಿ.ಇ. ಮುಗಿಸಿದೋರು ಊರಿಗೆ ದೊಡ್ಡವ್ರು.....
9) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)
ಪ್ರೇಮ ಬೆಂಕಿಯಂತೆ..
ಎಲ್ಲವನ್ನೂ ಪವಿತ್ರವಾಗಿಸುತ್ತೆ.
10) ಇದನ್ನು ಕಳಿಸಿದವರು:- ----ಸುದರ್ಶನ್ (ಶಿರಾ)
ಟೀಚರ್:- ಜೀರ್ಣಕ್ರಿಯೆ ಎಲ್ಲಿಂದ ಶುರು ಆಗಿ ಎಲ್ಲಿವರೆಗೆ ಅಂತ್ಯಗೊಳ್ಳುತ್ತದೆ?
ಗುಂಡ:- ಬಲಗೈನಿಂದ ಶುರು ಆಗಿ ಎಡಗೈನಿಂದ ಅಂತ್ಯಗೊಳ್ಳುತ್ತದೆ.
11) ಇದನ್ನು ಕಳಿಸಿದವರು:- ----ರಘು (ಶಿರಾ)
ಹೊಸ ರುಚಿ:-
"ಸ್ನೇಹ ಪಕ್ಕಾ ಮಾಡುವ ವಿಧಾನ"
ಬೇಕಾದ ಸಾಮಗ್ರಿಗಳು
ನಂಬಿಕೆ- ಒಂದು ಕಪ್
ವಿಶ್ವಾಸ -ಒಂದು ಕಪ್
ಚೇಷ್ಟೆ- ನಾಲ್ಕು ಕಪ್
ರುಚಿಗೆ ತಕ್ಕಷ್ಟು ಕೋಪ
11) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ಕೆಂಪು ಗುಲಾಬಿ ಕೊಟ್ಟು
ಅವನು ಹೇಳಿದ
ನಾ ನಿನ್ನ ಪ್ರಿಯತಮ.. /ವಾ..ವಾ../
ಕೆಂಪು ರಾಖಿ ಕಟ್ಟಿ
ಅವಳು ಹೇಳಿದಳು..
"ನೀ ನನ್ನ ಪ್ರಿಯ ತಮ್ಮ"
12) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ಅಪ್ಪ ಅಮ್ಮ ಸುಮ್ನೆ ಪ್ರಾಣ ತಿಂತಾರೆ,
ಮನಸ್ಸು ಕೊಟ್ಟು ಓದು ಅಂತಾ...
ಆದರೆ, ಅವರಿಗೇನು ಗೊತ್ತು....
ಮನಸ್ಸು ಕೊಟ್ಟ ಮೇಲೆ ಓದೋಕೆ ಆಗಲ್ಲಾ ಅಂತಾ
13) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ಮನೆ ಮುಂದೆ ಬಂದ ಕೋತಿಗಳನ್ನು ನೋಡಿದ ಕೂಡಲೇ..
ಹೆಂಡತಿ: ರೀ ನಿಮ್ಮ ನೆಂಟರು ಬಂದಿದಾರೆ..
ಗಂಡ (ಕೋಪಗೊಳ್ಳದೇ): ಓ ಅತ್ತೆ ಮಾವ.. ಯಾವಾಗ ಬಂದ್ರಿ??????
14) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ಸ್ಕೂಲಲ್ಲಿ ಮಲಗಿದ್ದ ಗುಂಡನನ್ನು ಎಬ್ಬಿಸಿ,
ಟೀಚರ್:- ಲೋ ಗುಂಡ, ಏಳೋ ಮೇಲೆ.. ನೀನು ಸ್ಕೂಲಿಗೆ ಬರೋದು ನಿದ್ದೆ ಮಾಡೋದಿಕ್ಕಾ?
ಗುಂಡ:- ಇಲ್ಲಾ ಸಾರ್.. ನಾನು ಸ್ಕೂಲಿಗೆ ಬರೋದು ವಿದ್ಯೆಗಾಗಿ.
ಟೀಚರ್: ಹಾಗಾದ್ರೆ, ಮಲ್ಕೊಂಡು ಯಾಕೆ ನಿದ್ದೆ ಮಾಡ್ತಿದೀಯಾ?
ಗುಂಡ:- ಸಾರ್, ಇವತ್ತು ವಿದ್ಯಾ ಬಂದಿಲ್ಲಾ ಸಾರ್..
15) ಇದನ್ನು ಕಳಿಸಿದವರು:- ----ಯದು ಢಾಭಾ (ಚಿಕ್ಕನಾಯಕನಹಳ್ಳಿ)
ನೀವು ಶೌರ್ಯದಲ್ಲಿ ಸಿಂಹ
ಗಾಂಭೀರ್ಯದಲ್ಲಿ ಗಜ
ಸೌಂದರ್ಯದಲ್ಲಿ ನವಿಲು
ಬುದ್ದಿಯಲ್ಲಿ ನರಿ
ವೇಗದಲ್ಲಿ ಚಿರತೆ...
ಒಟ್ಟಿನಲ್ಲಿ ನೀವು ಮನುಷ್ಯನೇ ಅಲ್ಲಾ ಕಣ್ರೀ........
16) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)
ಉತ್ತರವಿಲ್ಲದ ಪ್ರಶ್ನೆಗಳು
ನಿದ್ರೆ ಬಾರದ ರಾತ್ರಿಗಳು
ಮನಸ್ಸು ಕೊಡದ ಹುಡುಗಿ,
ಪ್ರಯತ್ನ ಬಿಡದ ಹುಡುಗ...
ಹೇ ಪ್ರೀತಿ.. ನೀ ಎಲ್ಲಿ ಅವಿತು ಕುಳಿತೆ????
17) ಇದನ್ನು ಕಳಿಸಿದವರು:- ----ಜಗದೀಶ (ಚಿಕ್ಕನಾಯಕನಹಳ್ಳಿ)
ಅವಳು ನಮ್ಮ ಮನೆ ಬಳಿ ಇದ್ದಳು
ದಿನಾ ನನ್ನನ್ನು ನೋಡುತ್ತಿದ್ದಳು
ನನ್ನ ಕಣ್ಣ ಮುಂದೆ ಬರುತ್ತಿದ್ದಳು
ನನ್ನ ನೋಡಿ ನಗುತ್ತಿದ್ದಳು
ಸನ್ನೆ ಮಾಡಿ ಕರೆಯುತ್ತಿದ್ದಳು
ನನ್ನ ನೋಡಿ ನಾಚುತ್ತಿದ್ದಳು
ಆದರೆ, ನಾನೇನು ಮಾಡಲಿ?
ಅವಳು ನಮ್ಮ ಬೀದಿಯ ಹುಚ್ಚಿ!!!!!
18) ಇದನ್ನು ಕಳಿಸಿದವರು:- ----ಶ್ರೀನಾಥ್ (ಶಿವಮೊಗ್ಗ) ನನ್ನ ಎಸ್ಸೆಮ್ಮೆಸ್ಸ್ ಫ್ರೆಂಡ್
" ಅಶ್ವಿನಿ ಹೇರ್ ಆಯಿಲ್ ಉಪಯೋಗಿಸಿದ್ದರಿಂದ ನನ್ನ ತಲೆ ಕೂದಲು ಉದುರುವುದು ಸಂಪೂರ್ಣವಾಗಿ ನಿಂತಿದೆ- ಎಚ್.ಡಿ. ದೇವೇಗೌಡ"
19) ಇದನ್ನು ಕಳಿಸಿದವರು:- ----ಮಂಜುನಾಥ (ಚಿಕ್ಕನಾಯಕನಹಳ್ಳಿ)
ಮಗು:- ಅಮ್ಮ, ದೇವರು ಅಂದರೆ ಯಾರು?
ಅಮ್ಮ:- ದೇವರು ಅಂದರೆ, ದೇವರು ಗಂಡಸೂ ಅಲ್ಲಾ, ಹೆಂಗಸೂ ಅಲ್ಲಾ..
ಮಗುವೂ ಅಲ್ಲಾ, ವಯಸ್ಕನೂ ಅಲ್ಲ.
ಕಪ್ಪೂ ಇಲ್ಲ, ಬಿಳುಪು ಇಲ್ಲ....
ಆತ ಮಕ್ಕಳನ್ನು ತುಂಬಾ ಪ್ರೀತಿಸುತ್ತಾನೆ..
ಮಗು:- ಹ್ಹೋ.. ಮೈಕಲ್ ಜಾಕ್ಸನ್ ಅಂತಾ ಮೊದಲೇ ಹೇಳಬಾರದಾ....
20) ಇದನ್ನು ಕಳಿಸಿದವರು:-
ಆಯುಧ ಪೂಜೆ ಆಫರ್
ನನ್ನ ಬ್ಲಾಗ್ನಲ್ಲಿ ಒಂದು ಕಮೆಂಟ್ ಬರೆದು ಗೆಲ್ಲಿರಿ
೧೦ ಲಕ್ಷದ ಮಾರುತಿ ಕಾರ್ ನ ಫೋಟೋ
೨೪ ಇಂಚ್ ಬಿ.ಪಿ.ಎಲ್. ಕಲರ್ ಟಿ.ವಿ. ಬಾಕ್ಸ್
ಬೆಂಗೂರಿನಿಂದ ಅಮೇರಿಕಾಕ್ಕೆ ಪ್ರಯಾಣಿಸಿದ ಹಳೇ ಟಿಕೀಟುಗಳು..
ಇನ್ನೂ ಹೆಚ್ಚು ಬಹುಮಾನಗಳು..
ಈ ಆಫರ್ ಕಾಮೆಂಟ್ ಬರಿಯೋರಿಗೆ ಮಾತ್ರ.....
ಇಂತಿ ನಿಮ್ಮ ಪ್ರೀತಿಯ,
ಶಿವಶಂಕರ ವಿಷ್ಣು ಯಳವತ್ತಿ
www.shivagadag.blogspot.com
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಲೇಖನಗಳು ನಿಮಗೆ ಇಷ್ಟವಾಗಬಹುದು
ಪ್ರೇಯಸಿ ಎಂಬ ಗೆಳತಿಗೆ.. ಒಂದು ಪ್ರೇಮ ಪತ್ರ.
2014 ರ ಯಳವತ್ತಿ ಟ್ವೀಟುಗಳು
ಲೋಕಾಯುಕ್ತ ದಾಳಿಯ ನಂತರ ಮುಂದೇನು???
'ಶಾಪಿಂಗ್' ಗುಬ್ಬಣ್ಣ ...!
ಲಘು ಹರಟೆ: ವಿಶ್ವ ಪುರುಷರ ದಿನ..! (ಗುಬ್ಬಣ್ಣ)
ಲಘು ಹರಟೆ: ಗುಬ್ಬಣ್ಣನ 'ಅವಾರ್ಡ್ ವಾಪ್ಸಿ' ಪ್ರೋಗ್ರಾಮ್' ವರ್ಸಸ್ 'ದೀಪಾವಳಿ ದಿವಾಳಿ' !
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (2)