ಮೂಢ ಉವಾಚ - 5 

ಅದರದು ತನು ಕುಹಕಿಗಳ ಕುಟುಕಿಗೆ|

ಬೆದರದು ತನು ಪಾತಕಿಗಳ ಧಮಕಿಗೆ||

ಮುದುಡುವುದು ಮನವು ಕದಡುವುದು|

ಪ್ರಿಯರ ಹೀನೈಕೆಗೆ ಹೀಗೇಕೋ ಮೂಢ||

 

ಅಡಿಗಡಿಗೆ ಕಾಡಿ ಶಿರನರವ ತೀಡಿ|

ಮಿಡಿದಿಹುದು ಉಡಿಯೊಳಗಿನ ಕಿಡಿಯು|

ಗಡಿಬಿಡಿಯಲಡಿಯಿಡದೆ ತಡೆತಡೆದು|

ಸಿಡಿನುಡಿಯ ನೀಡು ಸಿಹಿಯ ಮೂಢ||

****************

-ಕವಿನಾಗರಾಜ್.