ವೀರಾಂಜನೇಯನಿಗೆ ನಮನ - 5
ಕರುಣಿಸು ಓ ಮಹನೀಯ
ಕರುಣಿಸು ಓ ಮಹನೀಯ |
ನಾ ಎರಗುವೆ ವೀರಾಂಜನೇಯ ||ಪ||
ದುಗುಡಗಳಳಿಯಲು ಬಲವನು ನೀಡೋ |
ಮಾಸದ ನಂಬುಗೆಗಳ ದಯಮಾಡೋ ||
ಚಿರನೂತನ ಜೀವನ ಅನ್ವೇಷಣ |
ಯುಕುತಿಗೆ ಮುಕುತಿಯ ಗತಿಗಣಿಮಾಡೋ ||1||
ರಾಮನೆಂಬ ಎರಡಕ್ಷರ ಮಹಿಮೆಗೆ |
ಹನುಮನೆಂಬ ಮೂರಕ್ಷರ ಸಾಕ್ಷಿ ||
ರಾಕ್ಷಸ ಕುಲಕೋಲಾಹಲ ಭೀಮನೆ |
ಸಾತ್ವಿಕ ಸಂಪನ್ನನೆ ಕೊಡು ಭಕ್ತಿ ||2||
ಅತುಳ ವಿಕ್ರಮನೆ ಸಹನೆಯ ನೀಡೋ |
ಉದ್ವೇಗದ ಪರಿಪರಿ ಪರಿಹರಿಸೋ ||
ಚಿತ್ತಕೆ ಶಾಂತಿಯ ಜ್ಞಾನವ ಕೊಟ್ಟು |
ರಾಮಸಾಗರದಿ ತೇಲಾಡಿಸೋ ||3||
- ಸದಾನಂದ
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!