ರಾ ಗ - ಹಿ ದೂಸ್ಥಾನಿ ಕಾಪಿ : ತಾಳ - ಆದಿತಾಳ
ಬಂದಾನು ರಾಘವೇಂದ್ರ, ಇಂದಿಲ್ಲಿಗೆ | ಪ |
ಕಂದನ ಮೊರೆಕೇಳಿ ಜನನಿಯು ಬರುವಂತೆ | ಅ ಪ |
ಗಜವೇರಿ ಬಂದ, ಜಗದಿ ತಾ ನಿಂದಾ |
ಅಜಪಿತ ರಾಮನ, ಪದಾಬ್ಜ ಸ್ಮರಿಸುತಲಿ | ೧ |
ಹರಿಯ ಕುಣಿಸುತ ಬಂದ, ನರಹರಿ ಪ್ರಿಯ ಬಂದಾ |
ಶರಾಣಾಗತರನು ಕರವಪಿಡಿವೆನೆಂದು | ೨ |
ಪ್ರಲ್ಹಾದ ವ್ಯಾಸಮುನೀಂದ್ರ, ರಾಘವೇಂದ್ರ |
ನಿಲಿಸುತ ಮನವ ಮಧ್ವೇಶವಿಟ್ಠಲನಲ್ಲಿ | ೩ |
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!