ರಾ ಗ - ದೇಸ್ : ತಾಳ - ಆದಿತಾಳ

ರೋಗ ಹರನೆ ಕೃಪಾಸಾಗರ ಶ್ರೀಗುರು ರಾಘವೇಂದ್ರ ಪರಿಪಾಲಿಸೊ | ಪ |

ಸಂತತ ದುರ್ವಾದಿಧ್ವಾಂತ ದಿವಾಕರ |
ಸಂತ ವಿನುತ ಮಾತ ಲಾಲಿಸೊ | ೧ |

ಪಾವನಗಾತ್ರ ಸುದೇವವರನೆ |
ತವಸೇವಕಜನರೊಳಗಾಡಿಸೊ | ೨ |

ಘನ್ನಮಹಿಮ ಜಗನ್ನಾಥವಿಟ್ಠಲಪ್ರಿಯ |
ನಿನ್ನಾರಧನೆ ಮಾಡಿಸೊ | ೩ |