( ರಾಗ ಕಾಂಭೋಜ ಅಟತಾಳ)
ರಾಮನಾಮ ರತ್ನಹಾರ ದೊರಕಿತು ಎನಗೆ ||ಪ||
ಪೂರ್ವಪುಣ್ಯದ ಫಲಕೆ ||ಅ||
ಮಚ್ಛನೆಂಬೊ ಮಾಣಿಕ್ಯದ ಹರಳು
ಕೂರ್ಮನೆಂಬೊ ಕುಸುರಿಗಳು
ವರಹನೆಂಬೊ ಹೊಸ ಮೋಹನದ ಚಿನ್ನ
ನರಹರಿಯೆಂಬೊ ನಾಮದ ಸರಮುತ್ತು ||
ವಾಮನನೆಂಬೊ ಒಲಿವ ಏಕಾವಳಿಯು
ಪರಶುರಾಮನೆಂಬೊ ಪಚ್ಚೆಯ ಹರಳು
ಕೃಷ್ಣನೆಂಬೊ ಕೀಲುಗಳು ಅತಿ ಕುಶಲದಿಂದಲಿತ್ತು ||
ಬೌದ್ಧನೆಂಬೊ ಅತಳಗಳ ಬಿಗಿದಿತ್ತು
ಬಹು ಬಗಿದಂತಿತ್ತು ಕಲ್ಕಿಯೆಂಬೊ ಆ ಕುಣಿಕೆಯ ಹಚ್ಚಿಟ್ಟು
ಪುರಂದರವಿಠಲ ನಾಮದ ಸರಮುತ್ತು ಸೌಭಾಗ್ಯ ನಿಗಳಿಲ್ಲಿತ್ತು ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!