( ರಾಗ ಯಮುನಾಕಲ್ಯಾಣಿ ಆದಿತಾಳ)

ಪನ್ನಗಾದ್ರಿಪತಿ ನಮಗೆ ನೀ ಗತಿ-
ಯೆಂಬುವ ಮತಿಯರಿತು ಈ ಸ್ಥಿತಿ
ವೈಕುಂಠವಾಸ ವರಮಂದಹಾಸ
ಭಕ್ತರುಲ್ಲಾಸ ಲಕ್ಷ್ಮೀವಿಲಾಸ ||೧ ||

ಮಾನವವೇಷ ಮಂಜುಳಭಾಷಾ
ವಿನುತ ವಿಶೇಷ ಕೌಸ್ತುಭಭೂಷ ||೨||

ಶಂಕಿಸುತಿರಲು ಸಾಕುವ ಬಾಲ
ಸಂಖ್ಯೆಯ ಬಲ್ಲ ಪುರಂದರ ವಿಠಲ್ಲ ||೩ ||