( ರಾಗ ಕಲ್ಯಾಣಿ. ಏಕ ತಾಳ)
ಸಣ್ಣವನೆಂದು ನಾ ನಂಬಿ
ಬಣ್ಣವೆಲ್ಲ ಸುರೆಗೊಂದು
ಚಿಣ್ಣ ಬಾಲಕನು ಎಂದು
ತಿಣ್ಣ ಮೊಲೆಗಳೆ ಕೊಟ್ಟೆ ||ಪ||
ಗೊಂಬೆಯ ಮದುವೆಯೆಂದು
ನಂಬಿಸಿ ತಾ ಕರೆತಂದು
ಶಂಬರಾರಿಸತಿಯ ಮನೆ
ಎಂಬಲ್ಲಿ ಕೈದುಡುಕಿದ ||
ಚೆನ್ನೆಯನಾಡುವ ಎಂದು
ಚೆನ್ನಿಗ ತಾನಾಗಿ ಬಂದು
ಸನ್ನೆಯಿಂದ ಕೈ ಪಿಡಿದು
ಕೆನ್ನೆಯ ಮುದ್ದಿಸಿ ನಡೆದ ||
ಉಟ್ಟ ಸೀರೆಗಳನೆಲ್ಲ
ಕಟ್ಟಿ ಇಟ್ಟು ಜಲದೊಳು
ನೆಟ್ಟನೆ ಇಳಿಯಲು ನಾವು
ತಟ್ಟನೆ ತೆಗೆದೋಡಿದ ||
ಕಂಡ ಕಂಡಲ್ಲಿ ಎನ್ನ
ಗಂಡನಂದದಲಿ ನೋಡಿ
ಭಂಡಗೇಡು ಮಾಡಿದನು
ಪುಂಡ ನಿನ್ನ ಮಗನಮ್ಮ ||
ಸ್ಮರನಯ್ಯನು ತಾ ಬಂದು
ಸೆರಗ ಪಿಡಿದು ನಿಂದು
ನೆರೆದು ಕಳುಹಿದನಮ್ಮ
ಪುರಂದರವಿಠಲನು ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!