ಪಂತುವರಾಳಿ ರಾಗ-ಆದಿ ತಾಳ
||ಗಾಳಿ ಬಂದ ಕೈಯಲ್ಲಿ ತೂರಿಕೊಳ್ಳಿರೊ||ಪ||
||ಬಾಯ ಮುಚ್ಚ ಬೇಡಿ ನಾರಾಯಣನ ನೆನೆಯಿರೊ|| ಅ. ಪ||
||ನಿತ್ಯವಿಲ್ಲ ನೇಮವಿಲ್ಲ | ಮತ್ತೆ ದಾನ ಧರ್ಮವಿಲ್ಲ||
||ವ್ಯರ್ಥವಾಗಿ ಕೆಡದೆ ಪುರು | ಷೋತ್ತಮನ ನೆನೆಯಿರೊ||೧||
||ಕದ್ದು ಪುಸಿಯನಾಡಿ ಅವರ | ಬುದ್ಧಿಯಿಂದ ಕೆಡಲು ಬೇಡಿ||
||ಬುದ್ಧಿವಂತರಾಗಿ ಅನಿ | ರುದ್ಧನನ್ನು ನೆನೆಯಿರೊ||೨||
||ಭಕ್ತಿ ಕೊಡುವ ಮುಕ್ತಿ ಕೊಡುವ | ಮತ್ತೆ ಸಾಯುಜ್ಯವ ಕೊಡುವ||
||ಕರ್ತೃ ನಮ್ಮ ಪುರಂದರ | ವಿಠಲನ್ನ ನೆನೆಯಿರೊ||೩||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!