( ರಾಗ ಮಲಹರಿ. ತ್ರಿಪುಟ ತಾಳ)

ಪದುಮನಾಭ ಪರಮಪುರುಷ ಪರಂಜ್ಯೋತಿಸ್ವರೂಪ
ವಿದುರವಂದ್ಯಾ ವಿಮಲಚರಿತ ವಿಹಂಗಾದಿರೋಹಣ ||
ಉದಧಿವಾಸ ಉರಗಶಯನ ಉನ್ನತೋನ್ನತ ಮಹಿಮಾ
ಯದುಕುಲೋತ್ತಮ ಯಜ್ಞರಕ್ಷಕ ಅಜ್ಞಶಿಕ್ಷಕ ರಾಮನಾಮ ||
ವಿಭೀಷಣಪಾಲಕ ನಮೋ ನಮೋ ಇಭವರದಾಯಕ ನಮೋ ನಮೋ
ಶುಭಪ್ರದ ಸುಮನೋಹಿತ ಸುಜನಮನೋರಂಜನ ಅಭಿನವ ಪುರಂದರ ||