ಭೋಯತಿವರದೇಂದ್ರ | ಶ್ರೀಗುರು ರಾಯ ರಾಘವೇಂದ್ರ |ಪ|
ಕಾಯೋ ಎನ್ನ ಶುಭ | ಕಾಯೋ ಭಜಿಸುವೆನು | ಕಾಯೋ ತವಕ ಚಂದ್ರ |ಅ ಪ|

ಕಂಡ ಕಂಡ ಕಡೆಗೆ ತಿರುಗುತ ಬೆಂಡಾದೆನು ಕೊನೆಗೆ |
ಕಂಡ ಕಂಡವರ ಕೊಂಡಾಡುತ ನಿಮ್ಮ ಕಂಡೆ ಕಟ್ಟ ಕಡೆಗೆ |೧|

ನೇಮವು ಎನಗೆಲ್ಲಿ ಇರುವುದು ಕಾಮಾಧಮನಲ್ಲಿ |
ಶ್ರೀಮಹಾ ಮಹಿಮನೆ ಪಾಮರ ನಾ ನಿಮ್ಮ ನಾಮವೊಂದೆ ಬಲ್ಲೆ |೨|

ಮಂತ್ರವ ನಾನರಿಯೆ | ಶ್ರೀಮನ್ಮಂತ್ರಾಲಯ ದೊರೆಯೆ |
ಅಂತರಂಗದೊಳು ನಿಂತು ಪ್ರೇರಿಸುವ | ಅನಂತಾಧ್ರೀಶ ದೊರೆಯೆ |೩|