ಕೂಸಿನ ಕಂಡೀರಾ - ಸುಪ್ರಹ್ಲಾದನ ಕಂಡೀರಾ || ಪ ||

ರಾಕ್ಷಸ ಕುಲದಲಿ ಜನಿಸಿತು ಕೂಸು
ರಾಧಾಕೃಷ್ಣನ ಭಜಿಸಿತು ಕೂಸು
ರಾಗದ್ವೇಷಗಳ ಬಿಟ್ಟಿತು ಕೂಸು
ರಾಮನ ಪಾದವ ನೆನೆಯುವ ಕೂಸು || ೧ ||

ಘನಹರಿ ಕಂಭದಿ ತೋರಿತು ಕೂಸು
ಗಳಿಸಿತು ಕೃಷ್ಣನ ಪ್ರೇಮವ ಕೂಸು
ಘನಮಂತ್ರಾಲಯದಿ ವಾಸಿಪ ಕೂಸು
ವೇಣುಗೋಪಾಲನ ಪ್ರೀತಿಯ ಕೂಸು || ೨ ||

ಪ್ರಸಿಧ್ಧ ವ್ಯಾಸರಾಯರೆಂಬೊ ಕೂಸು
ಪ್ರವೀಣ ವಿದ್ಯೆಯೊಳೆನಿಸಿದ ಕೂಸು
ಪ್ರಹ್ಲಾದನೆಂಬೊ ಆಹ್ಲಾದ ಕೂಸು
ಪ್ರಸನ್ನ ಮಧ್ವೇಶವಿಠ್ಠಲನ ಕೂಸು || ೩ ||