(ರಾಗ ಮಧ್ಯಮಾವತಿ ಅಟತಾಳ)

ದೂರು ಮಾಡುವರೇನೆ ಕೃಷ್ಣಯ್ಯನ
ದೂರು ಮಾಡುವರೇನೆ ||ಪ||
ಮೂರುಲೋಕವನೆಲ್ಲ ಸಲಹೋ ಕೃಷ್ಣಯ್ಯನ ||ಅ||

ನಂದಗೋಕುಲದಲಿ ಮಂದೆ ಗೋವುಗಳ
ಮೂಂದೆ ಕೊಳಲನೂದಿ ಚಂದದಿ ಬರುವನ ||

ಕಾಮಕುಂದಲೆನ್ನ ಕಳವಳಗೊಳ್ಳುತ
ಸೋಮಸುಂದರ ಮುದ್ದು ಪುರಂದರವಿಠಲನ ||