(ರಾಗ ಮಧ್ಯಮಾವತಿ ಅತತಾಳ)
ಬಾರೊ ಬ್ರಹ್ಮಾದಿವಂದ್ಯ ||ಪ||
ಬಾರೊ ವಸುದೇವನಂದನ ||ಅ||
ಧಿಗಿಧಿಗಿ ನೀ ಕುಣಿದಾಡುತ ಬಾರೊ ದೀನರಕ್ಷಕನೆ , ಚೆಂದದಿ
ಜಗದೀಶ ನೀ ಕುಣಿದಾಡುತ ಬಾರೊ ಚೆನ್ನಕೇಶವನೆ ||
ಗೊಲ್ಲರ ಮನೆಗೆ ಪೋಗಲುಬೇಡ ಗೋವಿಂದ ಕೇಳೊ, ನಿನಗೆ
ಹಾಲು ಬೆಣ್ಣೆ ಮೊಸರನಿಕ್ಕುವೆ ಉಣ್ಣಬಾರೊ ||
ದೊಡ್ಡ ದೊಡ್ಡ ಮುತ್ತಿನ ಹಾರ ಹಾಕಿ ನೋಡುವೆನೊ , ನೀನು
ದೊಡ್ಡಪುರದ ದ್ವಾರಕಾವಾಸ ಪುರಂದರವಿಠಲ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!