(ರಾಗ ಶ್ರೀ ಆದಿತಾಳ )

ಯದುಕುಲನಂದನನ ನೋಡುವ ಬಾರೆ ಲಲಿತಾಂಗಿ ||ಪ||
ಹದಿನಾಲ್ಕು ಜಗವನ್ನು ಪೊರೆವ ನೀಲಮೇಘಾಂಗನ ||ಅ||

ಬಿಗಿದುಟ್ಟು ಕನಕಾಂಬರ ಕಾಂಚನದವನ , ನಗುಮುಖ ಶ್ರೀಧರನ
ಅಗಣಿತಗುಣನಿಧಿ ಜಗವ ಮೋಹಿಪ ಕೃಷ್ಣನ ||

ಸಣ್ಣ ಪೊಂಗೊಳನೂದುತ ಕಣ್ಣ ಸನ್ನೆಯ ಮಾಡುತ
ಚಿಣ್ಣರ ಒಡಗೂಡುತ ಕುಣಿದು ಬಾಹೋ ಕೃಷ್ಣನ ||

ಮಂದಹಾಸಮುಖಾಂಬುಜ ಪೊಂದಿದಂಥ ಗಂಧಕಸ್ತೂರಿತಿಲಕ
ಬಂದ ನಮ್ಮ ಪುರಂದರವಿಠಲ ಇಂದಿರೇಶಯದುನಂದನನ ನೋಡುವ ||