( ರಾಗ ಪೂರ್ವಿ ಆದಿತಾಳ)
ಹರಿಯ ನೆನೆವನೆ ಅಜ್ಞಾನಿ , ಘೋರ-
ದುರಿತಗಳಿಗೆ ಸಿಲುಕುವನೆ ಸುಜ್ಞಾನಿ ||ಪ||
ತಂದೆಯ ಬಯ್ಯುವನೆ ಪುತ್ರ , ಕಡು
ನಿಂದೆಯ ಮಾಡ್ವನೆ ಪರಮಪವಿತ್ರ
ಬಂಧನವ ಗೆಯ್ವನೆ ಮಿತ್ರ , ರಣಕೆ ಮುಂದಾಗಿ
ನಡೆಯದಿರುವನೆ ಕ್ಷಾತ್ರ ||
ದಾನಂಗಳೀವನೆ ಪಾಪಿ , ಕಡು
ದೀನರ ದಂಡಿಸುತಿರುವನೆ ಪ್ರತಾಪಿ
ಮೌನದಿಂದಿರುವನೆ ಕೋಪಿ , ಮತ್ತೆ
ಏನೇನು ತಿಳಿಯದವನೆ ನಿರ್ಲೇಪಿ ||
ಮದನನಂತಿರ್ಪನೆ ಕೇಡ , ತನ್ನ
ಹೃದಯದಿ ಹರಿಯ ಭಜಿಸುವನೆ ಮೂಢ
ಕದನಕೆಳಸುವನೆ ಪ್ರೌಢ
ನಮ್ಮ ಪುರಂದರವಿಠಲನ ನೋಡ್ವನೆ ಕುರುಡ ||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!