(ಶ್ರೀರಾಗ ಆದಿತಾಳ)
ಜಯ ಜಯ ಮಂಗಳ ಹರಿಗೆ
ಜಯ ಜಯ ಮಂಗಳ ಸಿರಿಗೆ
ಜಯ ಜಯ ಮಂಗಳ ವರದಪುರಂದರವಿಠಲಗೆ ||೧||
ಶುಭ ಇದು ಶೋಭನ ಹರಿಗೆ
ಶುಭ ಇದು ಶೋಭನ ಸಿರಿಗೆ
ಶುಭ ಇದು ಶೋಭನ ವರದಪುರಂದರವಿಠಲಗೆ ||೨||
ಪರಮಾನಂದವು ಹರಿಗೆ
ಪರಮಾನಂದವು ಸಿರಿಗೆ
ಪರಮಾನಂದವು ವರದಪುರಂದರವಿಠಲಗೆ ||೨||
ಜಯ ಜಯ ಪಂಕಜ ಹರಿಗೆ
ಜಯ ಜಯ ಪಂಕಜ ಸಿರಿಗೆ
ಜಯ ಜಯ ಪಂಕಜ ವರದಪುರಂದರವಿಠಲಗೆ ||೧||
ಜಯ ಜಯ ನಂದನ ಸುತಗೆ
ಜಯ ಜಯ ಭೀಷ್ಮಕಸುತೆಗೆ
ಜಯ ಜಯ ದಂಪತಿ ವರದಪುರಂದರವಿಠಲಗೆ ||೧||
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!