(ರಾಗ ಮೋಹನ ಛಾಪು ತಾಳ)

ಕೃಷ್ಣ ಬಾರೊ ಕೃಷ್ಣ ಬಾರೊ
ಕೃಷ್ಣಯ್ಯ ನೀ ಬಾರಯ್ಯ ||ಪ||
ಸಣ್ಣ ಹೆಜ್ಜೆಯನಿಟ್ಟು ಗೆಜ್ಜೆನಾದಗಳಿಂದ ||ಅ||

ಮನ್ಮಥಜನಕನೆ ಬೇಗನೆ ಬಾರೊ
ಕಮಲಾಪತಿ ನೀ ಬಾರೊ
ಅಮಿತಪರಾಕ್ರಮ ಶಂಕರ ಬಾರೊ
ಕಮನೀಯಗಾತ್ರನೆ ಬಾರಯ್ಯ ದೊರೆಯೆ ||

ಸುರುಳು ಕೇಶಗಳ ಒಲಿವ ಅಂದ
ಭರದ ಕಸ್ತೂರಿತಿಲಕದ ಚಂದ
ಶಿರದಿ ಒಪ್ಪುವ ನವಿಲುಕಣ್ಗಳಿಂದ
ತರತರಾಭರಣಗಳ ಧರಿಸಿ ನೀ ಬಾರೊ ||

ಹಾಲುಬೆಣ್ಣೆಗಳ ಕೈಯಲಿ ಕೊಡುವೆ
ಮೇಲಾಗಿ ಭಕ್ಷ್ಯಗಳ ಮುಚ್ಚಿಟ್ಟು ತರುವೆ
ಜಾಲ ಮಾಡದೆ ನೀ ಬಾರಯ್ಯ ಮರಿಯೆ
ಬಾಲ ಎನ್ತಂದೆ ಪುರಂದರವಿಠಲ ||