(ರಾಗ ಸುರುಟಿ ಆದಿತಾಳ)

ಮಂಗಳಂ ಜಯ ಮಂಗಳಂ ||ಪ||

ಗೋಪಗೋಪೀಸುತಗೆ ಗೋವಳರಾಯಕೆ
ಗೋವರ್ಧನೋದ್ಧರ ಗೋವಿಂದಗೆ
ಗೋಕುಲದಲಿ ಹುಟ್ಟಿ ಗೋವುಗಳನೆ ಕಾಯಿದ
ಗೋಪಾಲಕೃಷ್ಣನ ಶ್ರೀಪಾದಕ್ಕೆ ||

ಭಕ್ತಜನ ಪಾಲಿಪಗೆ ಭವರೋಗವೈದ್ಯಗೆ
ಅಚ್ಯುತಾನಂತ ಆದಿಪುರುಷಗೆ
ಅಖಿಳಲೋಕೇಶಗೆ ಅಜನ ಪಡೆದಾತಗೆ
ಕ್ಷೀರಸಾಗರವಾಸಿ ಲಕ್ಷ್ಮೀಶಗೆ ||

ಪನ್ನಂಗಶಯನಗೆ ಪಾವನಚರಿತ್ರಗೆ
ಸನ್ನುತಾನಂತ ಸದ್ಗುಣರಾಶಿಗೆ
ಎನ್ನೊಡೆಯ ಪುರಂದರವಿಠಲರಾಯಗೆ
ತನ್ನ ನಂಬಿದವರ ಸಲಹುವ ದೇವಗೆ ||