(ರಾಗ ನಾಟ ಆದಿತಾಳ)

ಜಯ ಜಯ ||ಪ||
ಜಯ ಜಾನಕೀಕಾಂತ ಜಯ ಸಾಧುಜನವಿನುತ
ಜಯತು ಮಹಿಮಾನಂತ ಜಯಭಾಗ್ಯವಂತ ||ಅ||

ದಶರಥನ ಮಗ ವೀರ ದಶಕಂಠಸಂಹಾರ
ಪಶುಪತೀಶ್ವರಮಿತ್ರ ಪಾವನಚರಿತ್ರ
ಕುಸುಮಬಾಣಸ್ವರೂಪ ಕುಶಲಕೀರ್ತಿಕಲಾಪ
ಅಸಮ ಸಾಹಸಶಿಕ್ಷ ಅಂಬುಜದಳಾಕ್ಷ ||

ಸಾಮಗಾನವಿಲೋಲ ಸಾಧುಜನಪರಿಪಾಲ
ಕಾಮಿತಾರ್ಥವಿದಾತ ಕೀರ್ತಿಸಂಜಾತ
ಸೋಮಸೂರ್ಯಪ್ರಕಾಶ ಸಕಲಲೋಕಾಧೀಶ
ಶ್ರೀ ಮಹಾರಘುವೀರ ಸಿಂಧುಗಂಭೀರ ||

ಸಕಲಶಾಸ್ತ್ರವಿಚಾರ ಶರಣುಜನಮಂದಾರ
ವಿಕಸಿತಾಂಬುಜವದನ ವಿಶ್ವಮಯಸದನ
ಸುಕೃತಮೋಕ್ಷಾಧೀಶ ಸಾಕೇತಪುರವಾಸ
ಭಕ್ತವತ್ಸಲ ರಾಮಪುರಂದರಾವಿಠಲ ||