ಹರಿಯೇ ಗತಿ ಸಿರಿ ವಿರಿಂಚಿ ಶಿವರಿಗೆ ಹರಿಯೆ ಗತಿ ಸುರಪಸುರಾದಿಗಳಿಗೆ

ಚರಣ

1:
ರುಕ್ಮಿಣೀ ದೇವಿಯ ಶಿಶುಪಾಲಗೀವೆನೆಂದು ರುಕ್ಮ ಸಂಭ್ರಮಿಸಲು ಕೃಷ್ಣ ಬಂದು
ಸಕಲ ರಾಯರುಗಳು ಸನ್ನದ್ಧರಾಗಿರೆ ರುಕುಮಿಣೀಯನು ತಂದು ವರಿಸಿ ಅಳಿದನಾಗಿ

2:
ಹಯಾಸ್ಯನೆಂಬುವ ವೇದವ ಕದ್ದೊಯ್ಯೆ ಹಯಗ್ರೀವನಾಗಿ ಹರಿಯವನ
ಕಾಯವ ಖಂಡಿಸಿ ಅಜಗೆ ವೇದವನಿತ್ತು ಕಾಯ್ದ ಕಮಲಾಕ್ಷನೆ ದೈವವೆಂದು

3:
ಭಸುಮಾಸುರನಿಗೊಂದಸದಳ ವರವಿತ್ತು ತ್ರಿಶೂಲಧರ ಓಡಿ ಬಳಲುತಿರೆ
ಬಿಸರುಹ ನಯನನು ಭಸುಮಾಸುರನನು ಭಸುಮವ ಮಾಡಿ ಶಿವನ ಪೊರೆದನಾಗಿ

4:
ಸುರಪನ ರಾಜ್ಯವ ಬಲಿಯಾಕ್ರಮಿಸಲು ಹರಿ ದಾನವ ಬೇಡಿ ಯಜ್ಞದಲಿ
ಚರಣದಿಂದಿಳೆಯ ಸ್ವರ್ಗವ ಈರಡಿ ಮಾಡಿ ಸುರಪಗೆ ರಾಜ್ಯವನಿತ್ತು ಪೊರೆದನಾಗಿ

5:
ಸುರ ಭೂಸುರನ್ನು ಅಸುರರು ಬಾಧಿಸೆ ಹರಿಯವತರಿಸಿ ಅಸುರರನೆಲ್ಲ
ಶಿರಗಳ ತರಿದು ಸುರ ಭೂಸುರರನು ಪೊರೆವುತ್ತಲಿಹನಾಗಿ ಪುರಂದರ ವಿಟ್ಠಲ