(ರಾಗ ಪಂತುವರಾಳಿ ಏಕತಾಳ)

ಕುಣಿದಾಡೊ ಕೃಷ್ಣ ಕುಣಿದಾಡೊ
ಫಣಿಯ ಮೆಟ್ಟಿ ಬಾಲವ ಪಿಡಿದು
ಕುಣಿಕುಣಿದಾಡುವ ಪಾದದೊಳೊಮ್ಮೆ ||ಪ||

ಮುಂಗುರುಳುಂಗುರ ಜಡೆಗಳರಳೆಲೆ
ಪೊಂಗೊಳಲಲಿ ರಾಗಂಗಳ ನುಡಿಸುತ್ತ ತ್ರಿ-
ಭಂಗಿಯಲಿ ನಿಂದು ಧಿಗಿಧಿಗಿತಾಂಗಿಣ-
ತಾಂಗಿಣಾ ಥಕ್ಕಥಕ್ಕಧಿಮಿಯೆಂದು ||

ಮುಖಜಾರಿದು ಫುಲ್ಲಗವಾಜಿಯೆ
ಝೆಂ ಝೆಂ ಝೆಂ ಚುಂಬನಕಾಗಿ
ಝಣಾಂ ಝಣಾ ಝೆಂ ಕಿಟತಾಕಿಟಕಿಟ ತೋಂಗಿಣತೋ-
ಧೆಮಿ ತೋಂಗಿಣ ಪಾದದೊಳೊಮ್ಮೆ ||

ಪ್ರಕಟದಿ ದಿನಗಳು ಪರಿಚಾರಂಗಳು
ವಿಕಲಿತ ನಾಟಕಭೇರಿಗಳು
ತೊಂಕಿಣಿ ತೊಂಹಿರಿ ತೊಂತರಿ ತರಿಗಿಟ
ತಕ್ಕಿಟತರಿಕಿಟ ತಕಿಟ ಶಬ್ದದಿ

ಪೆರಣಗಾಂಚಿತ್ತಲೆದಂವೆಗಂ
ಸರಹರಪ್ರತಿಜವಾಗರಶೆಂದ
ಶ್ರುಣಾಂ ಉರ್ರಾಂ ಎಂದು ಧಿಮಿಕಿಟ ಧಿಮಿಕಿಟ
ತಧಿಕುತ ಧಿಕುತ ತದ್ದಾಥೈ ಎಂದು ||

ಪಂಚಸ್ಥಳದಲಿ ಲಘುವಿಡಿದೊಮ್ಮೆ
ಗಣಪತಿ ನರಸಿಂಹ ಕೋನೇರಿ ತಿಮ್ಮ
ಪಂಚನಾಟಕಭೇದವ ವಾಜಿಸುತ್ತ
ಉಡುಪಿಲಿ ನಿಂದನು ಪುರಂದರವಿಠಲ ||